Ad Widget .

ಚಿಕ್ಕೋಡಿ:ಚುಣಾವಣಾ ಪ್ರಚಾರದಿಂದ ಹಿಂದುಳಿದ ರಮೇಶ್ ಕತ್ತಿ, ಜೋಲ್ಲೆಗೆ ಎದುರಾದ ಸೋಲಿನ ಭೀತಿ|ಜಂಟಿ ಪಕ್ಷವಿದ್ದರೂ ಕ್ಷೇತ್ರದಲ್ಲಿ ಒಂಟಿಯಾದ್ರಾ ಜೊಲ್ಲೆ.!?

ಸಮಗ್ರ ನ್ಯೂಸ್: ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ, ಕಾಂಗ್ರೆಸ್ ಪಕ್ಷದಿಂದ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರು ಬಲ ಪ್ರದರ್ಶನ ಮಾಡುತ್ತಾ ಭರ್ಜರಿ ಚುನಾವಣೆ ಪ್ರಚಾರ ಮಾಡಿ ಮತಯಾಚನೆ ನಡೆಸುತ್ತಿದ್ದಾರೆ. ಆದರೆ ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೇಗೆ ಸೋಲಿನ ಭೀತಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

Ad Widget . Ad Widget .

ಚಿಕ್ಕೋಡಿ ಬಿಜೆಪಿ ಲೋಕಸಭೆ ಟಿಕೆಟ್ ಪ್ರಭಲ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ ರಮೇಶ್ ಕತ್ತಿ ಅವರು ಯಾವುದೇ ರೀತಿ ಲೋಕಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ಬರುತ್ತಿಲ್ಲ, ಟಿಕೆಟ್ ಕೈ ತಪ್ಪಿದರಿಂದ ಮುನಿಸಿ ಕೊಂಡ ಕತ್ತಿ ಚುಣಾವಣಾ ಪ್ರಚಾರದಿಂದ ದೂರ ಉಳಿದಿದ್ದು ಬಿಜೆಪಿ ಹೇ ಕಮಾಂಡ್ ರಮೇಶ್ ಕತ್ತಿ ಅವರನ್ನ ಮನವೊಲಿಸಲು ವಿಪಲವಾಯ್ತಾ ಎಂಬ ಪ್ರಶ್ನೆ ಸಹ ಇದೀಗ ಉದ್ಭವಿಸುತ್ತಿದೆ.

Ad Widget . Ad Widget .

ಇನ್ನು ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಮತಕ್ಷೇತ್ರಗಳು ಬರುತ್ತವೆ. ಅದರಲ್ಲಿ 5 ಮತಕ್ಷೇತ್ರದಲ್ಲಿ ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ಪತಾಕೆ ಹಾರಿಸಿದೆ. ಇದನ್ನು ಭೇದಿಸಲು ಬಿಜೆಪಿ ಯಾವುದೇ ರೀತಿಯಲ್ಲಿ ಪ್ರಯತ್ನ ಮಾಡುತಿಲ್ಲ ಕೇವಲ ಮೋದಿಯನ್ನ ಬಂಡವಾಳ ಇಟ್ಟುಕೊಂಡು ಮತಯಾಚನೆ ಮಾಡುತ್ತಿರುವ ಜೋಲ್ಲೆಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜನರು ಮತ್ತೊಮ್ಮೆ ಆಶೀರ್ವಾದ ಮಾಡ್ತಾರಾ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿ ಚಿಕ್ಕೋಡಿ ಕಮಲ ಮುದುಡಿದ ಹಸ್ತದ ಗುರುತಿಗೆ ಸಾಥ್ ಕೋಡ್ತಾರ ಎಂಬುದು ಸದ್ಯಕ್ಕೆ ಕೂತೂಹಲ ಮೂಡಿಸಿದೆ.

Leave a Comment

Your email address will not be published. Required fields are marked *