Ad Widget .

ಬಿಜೆಪಿ ವಿರುದ್ಧವೇ ಗುಡುಗಿದ ಎಚ್.ಡಿ ದೇವೇಗೌಡ| ಕಾವೇರಿ ಹೋರಾಟ ಕುರಿತು ಅಸಮಾಧಾನ

ಸಮಗ್ರ ನ್ಯೂಸ್: ಮೈತ್ರಿ ಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ಬಿಜೆಪಿ ವಿರುದ್ಧವೇ ಗುಡುಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಕಾವೇರಿ ಹೋರಾಟದ ದಿನಗಳನ್ನು ನೆನೆದ ದೇವೇಗೌಡರು, ಬಿಜೆಪಿ ವಿರುದ್ಧವೇ ಅಸಮಾಧಾನ ಹೊರಹಾಕಿದ ಘಟನೆ ಕೊರಟಗೆರೆಯಲ್ಲಿ ನಡೆದ ಮೈತ್ರಿ ಸಭೆಯಲ್ಲಿ ನಡೆದಿದೆ.

Ad Widget . Ad Widget .

ಕಾವೇರಿ ಹೋರಾಟಕ್ಕೆ ಬಿಜೆಪಿಯ 17 ಜನ ಸಂಸದರು ನನಗೆ ಬೆಂಬಲ ನೀಡಲಿಲ್ಲ. ಲೋಕಸಭೆಯಲ್ಲಿ ಒಬ್ಬ ದೇವೇಗೌಡ, 17 ಜನ ಬಿಜೆಪಿ ಸಂಸದರು ಇದ್ದರು. ಆದರೆ, ನನಗೆ ಬೆಂಬಲ ನೀಡಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

Ad Widget . Ad Widget .

ಅಂದು ರಾಜ್ಯದ 12 ಕಾಂಗ್ರೆಸ್‌ ಲೋಕಸಭೆಗೆ ಆಯ್ಕೆಯಾಗಿದ್ದರು. ಅದರಲ್ಲಿ ಮಲ್ಲಿಕಾರ್ಜುನ ಖರ್ಗೆ, ಎಸ್.ಎಂ ಕೃಷ್ಣ, ವೀರಪ್ಪ ಮೊಯ್ಲಿ, ಕೆ.ಎಚ್ ಮುನಿಯಪ್ಪ ಕೇಂದ್ರ ಮಂತ್ರಿಗಳಾಗಿದ್ದರು. ಅಂದು ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದರು. ನಾನೇನು ಮಾಡೋಣ ದೇವೇಗೌಡ್ರೆ 40 ಮಂದಿ ತಮಿಳುನಾಡಿನ ಎಂಪಿಗಳು ಇದ್ದಾರೆ. ನನ್ನ ಸರ್ಕಾರ ಹೋಗುತ್ತೆ. ನೀವು ಕೋರ್ಟ್‌ಗೆ ಹೋಗಿ ಅಂತ ಮನಮೋಹನ್‌ ಸಿಂಗ್‌ ಹೇಳಿದ್ದರು ಎಂದು ದೇವೇಗೌಡರು ತಿಳಿಸಿದರು.

ಅಂದಿನ ನಾಲ್ಕು ಮಂತ್ರಿಗಳು ಈಗ ಬದುಕಿದ್ದಾರೆ. ಬಿಜೆಪಿಯ ಸಂಸದರಾಗಿದ್ದ ಅನಂತ್ ಕುಮಾರ್ ನಿಧನರಾಗಿದ್ದಾರೆ. ನಾನು ಆಗ ಅನಂತ್‌ ಕುಮಾರ್‌ಗೆ ಮನವಿ ಮಾಡಿದ್ದೆ. ನೀವು 17 ಜನ ಎಂಪಿಗಳಿದ್ದೀರಿ, ನಾವೆಲ್ಲಾ ಒಟ್ಟಾಗಿ ಹೋರಾಟ ಮಾಡೋಣ ಎಂದೆ. ಅದಕ್ಕೆ ಅನಂತ್‌ ಕುಮಾರ್‌ ನಾಳೆ ಪಕ್ಷದ ಮೀಟಿಂಗ್‌ ಇದೆ. ನಾವು ಬೆಂಬಲ‌ ಕೊಡುವ ಕುರಿತು ವಾಜಪೇಯಿ ಅವರನ್ನು ಕೇಳಿತ್ತೇವೆ ಎಂದರು. ಆದರೆ, ಮಾರನೇ ದಿನ ಅನಂತ್‌ ಕುಮಾರ್‌ ಬರಲೇ ಇಲ್ಲ ಎಂದು ದೇವೇಗೌಡ ಅಸಮಾಧಾನವನ್ನು ಹೊರಹಾಕಿದ್ದಾರೆ.

Leave a Comment

Your email address will not be published. Required fields are marked *