Ad Widget .

ಬೇಲೂರು: ಉತ್ತಮ ಮಳೆಗಾಗಿ ಹನುಮನಿಗೆ ವಿಶೇಷ ಪೂಜೆ

ಸಮಗ್ರ ನ್ಯೂಸ್‌ : ಪಟ್ಟಣದ ಹೊಳೆ ಬೀದಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಮನವಮಿಯ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಆಯೋಜಿಸಿದ ಸಂದರ್ಭದಲ್ಲಿ, ಹನುಮಂತ ದೇವರಿಗೆ ಉತ್ತಮ ಮಳೆಯಾಗಲೆಂದು ವಿಶೇಷ ಪುಷ್ಪಾಲಂಕಾರರೊಂದಿಗೆ ಪೊಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ, ದೇವಾಲಯದ ವತಿಯಿಂದ ಭಕ್ತಾದಿಗಳಿಗೂ ಹಾಗೂ ಸಾರ್ವಜನಿಕರಿಗೂ ಕೋಸಂಬರಿ, ಪಾನಕ ವಿತರಿಸಲಾಯಿತು.

Ad Widget . Ad Widget .

ದೇಗುಲದ ಉಪಾಧ್ಯಕ್ಷೆ ಸೌಮ್ಯ ಆನಂದ್ ಮಾತನಾಡಿ, ಮಳೆಯೇ ಇಲ್ಲದ ಕಾರಣ ಕೆರೆಗಳು ಬತ್ತಿ ಹೋಗಿದ್ದು, ರೈತರ ಬೆಳೆಗಳಿಗೂ ಸಹ ಸಮಸ್ಯೆ ಆಗುತ್ತಿದೆ. ಈಗಾಗಲೇ ಮುಂಗಾರು ರಾಜ್ಯ ಪ್ರವೇಶ ಮಾಡಬೇಕಿತ್ತು, ಆದರೆ ಕೆಲ ಕಾರಣದಿಂದ ಮುಂಗಾರು ಪ್ರವೇಶ ತಡವಾಗಿದ್ದು, ಕುಡಿಯಲು ನೀರಿಲ್ಲದೇ ಜನ ತತ್ತರಿಸಿ ಹೋಗಿದ್ದಾರೆ. ಅದ್ದರಿಂದ ಇಂದು ಹನುಮನಿಗೆ ವಿಶೇಷ ಪೂಜೆ ಸಲ್ಲಿಸಿದ್ದು, ಕಷ್ಟ ನೀಗಿಸುವಂತೆ ಎಲ್ಲಾರೂ ಪ್ರಾರ್ಥಿಸಲಾಗಿದೆ ಎಂದರು.

Ad Widget . Ad Widget .

ಈ ಸಂದರ್ಭದಲ್ಲಿ ದೇಗುಲ ಟ್ರಸ್ಟ್ ಕಾರ್ಯದರ್ಶಿ ಪುನೀತ್, ಸಂತೋಷ್, ಬಿ.ಬಿ.ಶಿವರಾಜು, ಆಡಿಟರ್ ಸುರೇಶ್, ಸೌಮ್ಯ, ಅಶ್ವಥ್ ಸೇರಿದಂತೆ ಇತರರು ಇದ್ದರು

Leave a Comment

Your email address will not be published. Required fields are marked *