ಇಂದು ಮಂಡ್ಯದಲ್ಲಿ ನಟ ದರ್ಶನ್ ಪ್ರಚಾರ/ ಕಾಂಗ್ರೆಸ್ ಪರ ನಿಂತ ಚಾಲೆಂಜಿಂಗ್ ಸ್ಟಾರ್

ಸಮಗ್ರ ನ್ಯೂಸ್: ಕಾಂಗ್ರೆಸ್ ಅಭ್ಯರ್ಥಿ ಸ್ಟ್ರಾರ್ ಚಂದ್ರು ಪರ ನಟ ದರ್ಶನ್ ಇಂದು ಮಂಡ್ಯ ಜಿಲ್ಲೆ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಬೆಳಗ್ಗೆ 9:30ಕ್ಕೆ ಮಂಡ್ಯ ಜಿಲ್ಲೆ ಹಲಗೂರು ಪಟ್ಟಣದಿಂದ ಮತಯಾಚನೆಗೆ ಪ್ರಚಾರ ಆರಂಭಿಸಲಿದ್ದಾರೆ.

Ad Widget ... ..

ಈ ಹಿಂದೆ ದರ್ಶನ್ ಅವರು ಸುಮಲತಾ ಅಂಬರೀಶ್ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದರು. ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಸುಮಲತಾ ಅಂಬರೀಶ್ ಈ ಬಾರಿ ಮಂಡ್ಯ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಎನ್‍ಡಿಎ ಅಭ್ಯರ್ಥಿಯಾಗಿ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ.

Ad Widget

ನಟರಾದ ದರ್ಶನ್ ಮತ್ತು ಯಶ್ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸಿ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Leave a Comment

Your email address will not be published. Required fields are marked *