ಸಮಗ್ರ ನ್ಯೂಸ್ : ಇರಾನ್ ಮೂಲದ ಮಹಿಳೆಗೆ ಮೈಕೈ ನೋವು ಕಾಣಿಸಿಕೊಂಡಿದ್ದು, ತಕ್ಷಣ 400 ಮಿಗ್ರಾಂ ಐಬುಪ್ರೊಫೇನ್ ವೈದ್ಯರ ಸಲಹೆ ಇಲ್ಲದೆ ಮಾತ್ರೆ ಸೇವನೆ ಮಾಡಿದ್ದಾಳೆ.
ಈ ಮಾತ್ರೆ ಸೇವನೆ ಮಾಡಿದ ಕೆಲ ಗಂಟೆಯಲ್ಲೇ ಮಹಿಳೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಆಕೆಯ ಕಣ್ಣು ಆರಂಭದಲ್ಲಿ ಕೆಂಪಾಗಿ, ನಂತರ ರಕ್ತ ಬರಲು ಶುರುವಾಯ್ತು. ಮುಖ ಊದಿಕೊಂಡಿತು. ತುಟಿಗಳಲ್ಲಿ ಹಳದಿ ಬಣ್ಣದ ಪ್ಯಾಚ್ ಕಾಣಿಸಿಕೊಂಡಿತು. ಅಲ್ಲದೆ ಚರ್ಮ ಹಾವಿನಂತಾಯ್ತು.
ಕೊನೆಗೆ ಮಹಿಳೆಯನ್ನು ಐಸಿಯುವಿಗೆ ಸೇರಿಸುವ ಸ್ಥಿತಿ ನಿರ್ಮಾಣವಾಯ್ತು. ಮಹಿಳೆ ಆತಂರಿಕ ಅಂಗಕ್ಕೆ ಮಾತ್ರೆ ಯಾವುದೇ ಪರಿಣಾಮ ಬೀರಿಲ್ಲ. ಹೃದಯ ಹಾಗೂ ಶ್ವಾಸಕೋಶ ಆರೋಗ್ಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಇಷ್ಟರ ಮಧ್ಯೆಯೂ ಆಕೆ ಪರಿಸ್ಥಿತಿ ಎಷ್ಟು ಹದಗೆಟ್ಟಿತೆಂದರೆ ಆಕೆ ಯಾವುದೇ ಆಹಾರವನ್ನು ಕುಡಿಯಲು, ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಮಹಿಳೆಯನ್ನು ಇನ್ನೂ ಏಳು ದಿನ ಆಸ್ಪತ್ರೆಯಲ್ಲಿಟ್ಟು ಪರಿಶೀಲನೆ ನಡೆಸುವುದಾಗಿ ವೈದ್ಯರು ಹೇಳಿದ್ದಾರೆ.
ಹೊಸ ಗುಳ್ಳೆ, ಊತ ಕಾಣಿಸದೆ ಇದ್ದಲ್ಲಿ ಆಕೆಯನ್ನು ಮನೆಗೆ ಕಳುಹಿಸುವುದಾಗಿ ತಿಳಿಸಿದ್ದಾರೆ.. ಟ್ಯೂಬ್ ಮೂಲಕ ಆಕೆಗೆ ಆಹಾರ ನೀಡಲಾಗ್ತಿದೆ. ಡ್ರಿಪ್ ಏರಿಸಲಾಗಿದ್ದು, ವಿವಿಧ ಪ್ರತಿ ಜೀವಕಗಳನ್ನು ಇಂಜೆಕ್ಟ್ ಮಾಡಲಾಗಿದೆ.
ಐಬುಪ್ರೊಫೇನ್ ಮಾತ್ರೆ ಪರಿಣಾಮ : ವೈದ್ಯರ ಪ್ರಕಾರ, ಐಬುಪ್ರೊಫೇನ್ ಮಾತ್ರೆ ಹಾನಿಕಾರಕವಲ್ಲ. ಆದ್ರೆ ವೈದ್ಯರ ಸಲಹೆ ಇಲ್ಲದೆ ಅದನ್ನು ತೆಗೆದುಕೊಂಡಲ್ಲಿ ಅದು ಸಾವಿಗೆ ಕಾರಣವಾಗಬಹುದು. ಗಂಭೀರ ಚರ್ಮದ ಸೋಂಕು ಕೂಡ ಕಾಣಿಸಿಕೊಳ್ಳಬಹುದು. ಆರೋಗ್ಯಕರ ರಕ್ತನಾಳ ಹಾಗೂ ಜೀವಕೋಶದ ಮೇಲೆ ಇದು ಪರಿಣಾಮ ಬೀರುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಸ್ಟೀವನ್ಸ್-ಜಾನ್ಸನ್ ಸಿಂಡ್ರೋಮ್ ಎಂದು ಕರೆಯುತ್ತಾರೆ. ಇದು ಅಪರೂಪದ ಸೋಂಕು ಎನ್ನುತ್ತಾರೆ ವೈದ್ಯರು.