ಹಾಸನ: ಕಾರು ಡಿಕ್ಕಿ ಹೊಡೆದು ಸೈಕಲ್‌ ಸವಾರ ಮೃತ್ಯು

ಸಮಗ್ರ ನ್ಯೂಸ್‌ : ಸೈಕಲ್‌ನಲ್ಲಿ ತೆರಳುತ್ತಿದ್ದ ವೃದ್ಧನಿಗೆ ಕಾಟೀಹಳ್ಳಿ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸೈಕಲ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹಾಸನ ನಗರದ ಡೈರಿ ಸರ್ಕಲ್ ಬಳಿ ನಡೆದಿದೆ.

Ad Widget ... ..

ಶ್ರೀರಾಮನಗರದ ನಿವಾಸಿ ಆನಂದ್ (60) ಮೃತ ದುರ್ದೈವಿ. ಕಾರಿನ ಡಿಕ್ಕಿ ರಭಸಕ್ಕೆ ಕೆಳಗೆ ಹಾರಿ ಬಿದ್ದ ಆನಂದ್‌ ಅವರ ಮುಖವೇ ಅಪ್ಪಚ್ಚಿ ಆಗಿತ್ತು. ತಲೆಗೆ ಗಂಭೀರವಾಗಿ ಗಾಯವಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Ad Widget

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Leave a Comment

Your email address will not be published. Required fields are marked *