Ad Widget .

ಬೇಲೂರು: ಕುಡಿಯುವ ನೀರಿಲ್ಲದೆ ಪರದಾಟ; ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಸಮಗ್ರ ನ್ಯೂಸ್‌ : ತಾಲೂಕಿನ ಚಟಚಟನಹಳ್ಳಿ ಗ್ರಾಪಂ ವ್ಯಾಪ್ತೀಯ ನಾಗರಾಜಪುರ ಗ್ರಾಮದಲ್ಲಿ ಸುಮಾರು ೫ ತಿಂಗಳಿಂದ ಕುಡಿಯುವ ನೀರಿಗೆ ಹಾಹಾಕಾರ ಇದ್ದರೂ ಸಹ ಯಾವುದೇ ಜಪ್ರತಿನಿಧಿಗಳಾಗಲಿ ಹಾಗು ತಾಲೂಕು ಆಡಳಿತಾಧಿಕಾರಿಗಳಾಗಲಿ ಗಮನ ಹರಿಸದೆ ಇರುವುದರಿಂದ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ನೀರು ಕೊಡಿ ಇಲ್ಲದಿದ್ದರೆ ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಖಾಲಿ ಕೊಡ ಹಾಗೂ ಗುರುತಿನ ಚೀಟಿ ಹಿಡಿದು ಪ್ರತಿಭಟನೆ ಮಾಡಿದರು.

Ad Widget . Ad Widget .

ಈ ವೇಳೆ ಮಾತನಾಡಿದ ಗ್ರಾಮದ ಮುಖಂಡ ಪರಮೇಶ್ ನಮ್ಮ ನಾಗರಾಜಪುರ ಗ್ರಾಮದಲ್ಲಿ ೧೫೦ ಭೋವಿ ಜನಾಂಗದ ಕುಟುಂಬಗಳಿದ್ದು ಇಲ್ಲಿ ಇರುವಂತಹ ಎರಡೇ ಎರಡು ಕೊಳವೆ ಬಾವಿಗಳಿದ್ದರೂ ಸಹ ಅದರಲ್ಲಿ ನೀರು ಬರದೆ ಸಂಪೂರ್ಣವಾಗಿ ನಿಂತುಹೋಗಿದೆ. ನಾವುಗಳು ತಾಲೂಕು ಆಡಳಿತಕ್ಕೆ ಹಾಗೂ ಗ್ರಾಪಂ ಅಧ್ಯಕ್ಷರಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರು ಸಹ ಇದರ ಬಗ್ಗೆ ಗಮನ ಹರಿಸಿಲ್ಲ.

Ad Widget . Ad Widget .

ನಮ್ಮ ಸಮಸ್ಯೆಯನ್ನು ಕೇಳಲು ಸಹ ಯಾರೂ ಬಂದಿಲ್ಲ.ಅದಕ್ಕಾಗಿ ನಮ್ಮ ಇಡೀ ಗ್ರಾಮದ ಜನರು ಗ್ರಾಪಂ ಮುಂಭಾಗದಲ್ಲಿ ಖಾಲಿ ಕೊಡ ಹಿಡಿದು ಪ್ರತಿಭಟನೆ ಮಾಡುತ್ತಿದ್ದೇವೆ.ಇದಕ್ಕೂ ಬಗ್ಗದಿದ್ದರೆ ನಮ್ಮ ಸಮಸ್ಯೆಯನ್ನು ಬಗೆಹರಿಸದಿದ್ದರೆ ನಮ್ಮ ಗ್ರಾಮದ ಯಾರೊಬ್ಬರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡದೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದಲ್ಲದೆ ಕೇವಲ ಸುಳ್ಳು ಆಶ್ವಾಸನೆ ಭರವಸೆ ನೀಡುವುದು ನಮಗೆ ಬೇಕಿಲ್ಲ.ನಾವೇ ಒಂದು ತಿಂಗಳಿನಿಂದ ಟ್ಯಾಂಕರ್ ಗಳ ಮೂಲಕ ನೀರನ್ನು ತಂದು ನಮ್ಮ ಗ್ರಾಮಕ್ಕೆ ನೀಡುತ್ತಿದ್ದೇವೆ ಎಂದು ಅಧಿಕಾರಿಗಳ ವಿರುದ್ಧ ಹಾಗೂ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ವೆಂಕಟೇಶ್, ಪ್ರಕಾಶ್, ಸೋಮು, ಲೊಕೇಶ್, ಗಂಗಾ, ನೇತ್ರಾ, ಗಂಗಮ್ಮ, ವೆಂಕಮ್ಮ, ಚಿಕ್ಕಮ್ಮ ಇತರರು ಹಾಜರಿದ್ದರು.

Leave a Comment

Your email address will not be published. Required fields are marked *