Ad Widget .

ಬೆಳಗಾವಿ:ಬಾವಿಗೆ ಕಾಲು ಜಾರಿ ಬಿದ್ದ ಎತ್ತು ಕಾಪಾಡಿದ ಅಥಣಿ ಅಗ್ನಿಶಾಮಕ ಸಿಬ್ಬಂದಿ

ಸಮಗ್ರ ನ್ಯೂಸ್: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೊಳೆ ಗ್ರಾಮದಲ್ಲಿ ಹಣಮಂತ ಸಿದ್ರಾಮ ಸಂಭೋಜಿ ಎಂಬುವವರ ಬಾವಿಯೊಂದರಲ್ಲಿ ಅದೆ ಗ್ರಾಮದ ತುಳಜಪ್ಪ ನಿಂಗಪ್ಪ ಬಡಕೆ ಎಂಬವರ ಗೂಳಿ (ಎತ್ತು) ಮೇಯುತ್ತ ಹೋಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವ ಘಟನೆ ತಕ್ಷಣ ಮೊಳೆ ಗ್ರಾಮದ ನಡೆದಿದೆ.

Ad Widget . Ad Widget .

ಸ್ಥಳೀಯರು ಅಥಣಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿದಾಕ್ಷಣ ಘಟನಾ ಸ್ಥಳಕ್ಕೆ ಜಲವಾಹನ ಮತ್ತು ಅಗ್ನಿಶಾಮಕರವರ ನೇತೃತ್ವದಲ್ಲಿ ಘಟನಾ ಸ್ಥಳಕ್ಕೆ ರಕ್ಷಣಾ ಸಾಮಗ್ರಿಗಳೊಂದಿಗೆ ಆಗಮಿಸಿ 80 ಅಡಿ ಅಳತೆಯ 35×35 ವಿಸ್ತೀಣ೯ದ ನೀರಿರುವ ಬಾವಿಯಲ್ಲಿ ಬಿದ್ದ ಗೂಳಿ (ಎತ್ತು )ನ್ನು ಪ್ರಾಣ ಪಣಕ್ಕೆ ಇಟ್ಟು ಪಟ್ಟು ಸುಮಾರು 02:00 ಎರಡು ಗಂಟೆಗಳ ಕಾರ್ಯಚರಣೆಯನ್ನು ಮಾಡಿ ಗೂಳಿ (ಎತ್ತು )ನ್ನು ಜೀವಂತವಾಗಿ ಬಾವಿಯಿಂದ ಹೊರ ತೆಗೆದು ರಕ್ಷಣೆ ಮಾಡಲಾಯಿತು.

Ad Widget . Ad Widget .

ಎತ್ತನ್ನು ಪ್ರಾಣ ಕಾಪಾಡಿದ ಅಥಣಿ ಅಗ್ನಿಶಾಮಕ ಇಲಾಖೆಗೆ ಸಿಬ್ಬಂದಿಗಳಿಗೆ ಚಪ್ಪಾಳೆ ಮೂಲಕ ಧನ್ಯವಾದಗಳು ತಿಳಿಸಿದರು.

ತಮ್ಮ ಪ್ರಾಣ ಪಣಕ್ಕೆ ಇಟ್ಟು ಜೀವ ಉಳಿಸಿವ ಕೆಲಸ ಅಗ್ನಿಶಾಮಕ ದಳದವರು ಮಾಡುತ್ತಾರೆ ಅವರ ಸೇವೆ ಅಮೋಘ ಎಂದು ಬಣಿಸಿದರು. ಈ ರಕ್ಷಣಾ ಕಾರ್ಯಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಪ್ರಕಾಶ್ ಆಲಿಶೆಟ್ಟಿ, ಅಪ್ಪಾಸಾಹೇಬ ಹೊನಖಾಂಡೆ, ಆಸಿಫ್ ಅಹಮದ್ ಸನದಿ, ಮಹಾದೇವ ಚೌಗಲಾ, ಸಂತೋಷ ಧರ್ಮಟ್ಟಿ, ಶಿವಪ್ಪ ಹನಮಾಪುರ ಮತ್ತು ಸ್ಥಳೀಯರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave a Comment

Your email address will not be published. Required fields are marked *