ಸಮಗ್ರ ನ್ಯೂಸ್ : ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದಾರೆ ಎನ್ನುವ ಹಲವು ಚರ್ಚೆಗಳ ನಡುವೆ ರಾಹುಲ್ ಗಾಂಧಿ ಅವರು ಬಾಯ್ತಪ್ಪಿ ಡಿಕೆಶಿಯನ್ನು ಸಿಎಂ ಎಂದು ಮಾತು ಭಾರೀ ಚರ್ಚೆಗೆ ಕಾರಣವಾಗಿದೆ.
ಮಾಲೂರು ತಾಲೂಕಿನ ಚೊಕ್ಕಂಡಹಳ್ಳಿ ಗೇಟ್ ನಲ್ಲಿ ಬುಧವಾರ ಸಂಜೆ ನಡೆದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕರ್ನಾಟಕ ಜನರಿಗೆ ನಮಸ್ಕಾರ ಎಂದು ಕನ್ನಡದಲ್ಲಿ ಮಾತು ಆರಂಭಿಸಿದರು. ಆ ಬಳಿಕ ಕಾಂಗ್ರೆಸ್ ಪ್ರಬಲ ನಾಯಕರಿಬ್ಬರ ಹುದ್ದೆಗಳನ್ನೇ ಬದಲಿಸಿ ಸಂಭೋದಿಸಿದರು.
ಖರ್ಗೆ ಜಿ, ಕಾಂಗ್ರೆಸ್ ಅಧ್ಯಕ್ಷ ಸಿದ್ದರಾಮಯ್ಯ ಜಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿ, ಕೆ.ಎಚ್. ಮುನಿಯಪ್ಪ ಜಿ ಎಂದು ಭಾಷಣ ಆರಂಭಿಸಿದರು. ಇದು ಬಿಜೆಪಿ, ಜೆಡಿಎಸ್ ಮತ್ತು ಟ್ರೋಲ್ ಮಾಡುವವರಿಗೆ ದೊಡ್ಡ ಆಹಾರವಾಗಿ ಪರಿಣಮಿಸಿದೆ.
ತಮ್ಮ ಭಾಷಣದ ಉದ್ದಕ್ಕೂ ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರಾದರೂ ಎಲ್ಲಕ್ಕಿಂತ ಹೆಚ್ಚು ಆದ್ಯತೆ ಅವರು ಅರಿವಿಗೆ ಬಾರದೆ ಹುದ್ದೆಗಳ ಬದಲಾವಣೆ ಮಾಡಿ ಸಂಬೋಧಿಸಿರುವುದು ನಾನಾ ಚರ್ಚೆಗೆ ಕಾರಣವಾಗಿದೆ.