Ad Widget .

ಅಯೋಧ್ಯೆಯಲ್ಲಿ ರಾಮನವಮಿ ಸಂಭ್ರಮ| ಬಾಲರಾಮನನ್ನು ಸ್ಪರ್ಶಿಸಿದ ಸೂರ್ಯ ರಶ್ಮಿ

ಸಮಗ್ರ ನ್ಯೂಸ್: ಇಂದು ರಾಮ ನವಮಿ ಸಂಭ್ರಮ. ಉತ್ತರ ಪ್ರದೇಶದ ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೊಂಡಿರುವ ಬಾಲಕ ರಾಮನಿಗೆ ಇದು ಮೊದಲ ಶ್ರೀ ರಾಮ ನವಮಿ. ಈ ವರ್ಷ ವಿಶೇಷವಾಗಿ ರಾಮನಿಗೆ ‘ಸೂರ್ಯ ಅಭಿಷೇಕ / ಸೂರ್ಯ ತಿಲಕʼವೂ ಇಂದು ನೆರವೇರಿತು. ಕೋಟ್ಯಂತರ ಭಕ್ತರು ಈ ಕ್ಷಣವನ್ನು ಕಣ್ತುಂಬಿಕೊಂಡರು.

Ad Widget . Ad Widget .

ಸುಮಾರಾಗಿ ಮೂರರಿಂದ ನಾಲ್ಕು ನಿಮಿಷಗಳ ವರೆಗೆ ರಾಮನ ಮೇಲೆ ಸೂರ್ಯನ ಕಿರಣಗಳು ಸ್ಪರ್ಶಿಸಿದೆ.
ಸೂರ್ಯರಶ್ಮಿ ನೇರವಾಗಿ ರಾಮ ಹಣೆಗೆ ಬೀಳುವಂತೆ ಮಾಡಲು ಈ ಹಿಂದೆ ವಿಜ್ಞಾನಿಗಳು ಒಂದು ಪ್ರಯೋಗವನ್ನು ಕೂಡ ನಡೆಸಿದರು. ಇದೀಗ ಈ ವಿಧಾನ ಯಶಸ್ವಿಯಾಗಿದೆ. ದೇವಾಲಯದ ಟ್ರಸ್ಟ್‌ನಿಂದ ಸುಮಾರು 100 ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದ್ದು, ಸರ್ಕಾರದಿಂದ 50 ರಾಮನವಮಿ ಆಚರಣೆ ಲೈವ್​​​​ ಸ್ಕ್ರೀನ್​​ ನೋಡಲು ವ್ಯವಸ್ಥೆ ಮಾಡಲಾಗಿತ್ತು.

Ad Widget . Ad Widget .

Leave a Comment

Your email address will not be published. Required fields are marked *