Ad Widget .

ಹಿಂದೂಗಳ ಮೇಲೆ ದಾಳಿ ಹೆಚ್ಚಳ/ ಕಳವಳ ವ್ಯಕ್ತಪಡಿಸಿದ ಭಾರತೀಯ ಅಮೆರಿಕನ್ ಸಂಸದ,

ಸಮಗ್ರ ನ್ಯೂಸ್: ಅಮೆರಿಕದಲ್ಲಿ ಹಿಂದೂಗಳ ಮೇಲೆ ದಾಳಿ ಹೆಚ್ಚಾಗುತ್ತಿದೆ ಎಂದು ಭಾರತೀಯ ಅಮೆರಿಕನ್ ಸಂಸದ, ಕರ್ನಾಟಕ ಮೂಲದ ಶ್ರೀ ಥಾನೇದಾರ್ ಕಳವಳ ವ್ಯಕ್ತಪಡಿಸಿದ್ದು, ಇದು ಸಂಘಟಿತ ಹಿಂದೂ ವಿರೋಧಿ ದಾಳಿಯ ಆರಂಭ. ಈ ದ್ವೇಷದ ವಿರುದ್ಧದ ಸದಸ್ಯರೆಲ್ಲರೂ ಒಂದಾಗಬೇಕು ಎಂದು ಕರೆ ಕೊಟ್ಟಿದ್ದಾರೆ.

Ad Widget . Ad Widget .

ಹಿಂದೂಗಳ ಮೇಲೆ ದಾಳಿಗಳು ಹೆಚ್ಚಳವಾಗುತ್ತಿದೆ. ಆನ್ಲೈನ್ ಗಳಲ್ಲಿ ಅವರ ವಿರುದ್ಧ ತಪ್ಪು ಮಾಹಿತಿಗಳನ್ನು ನೀಡುವ ಕೆಲಸ ನಡೆಯುತ್ತಿದೆ. ಹಿಂದೂ ಧರ್ಮ ಇತರರ ಮೇಲೆ ದಾಳಿ ಮಾಡುವ ಧರ್ಮವಲ್ಲ, ಆದರೆ ಅವರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದರ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಭಾರತೀಯ ಅಮೆರಿಕ ಸಂಸದ ಥಾನೇದರ್ ಹೇಳಿದ್ದಾರೆ

Ad Widget . Ad Widget .

ಇತ್ತೀಚಿಗೆ ಥಾನೇದರ್ ಸೇರಿದಂತೆ ಇತರ ನಾಲ್ವರು ಭಾರತೀಯ ಅಮೆರಿಕನ್ ಜನಪ್ರತಿನಿಧಿಗಳು ಹಿಂದೂ ದೇವಾಲಯ ಮತ್ತು ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ತನಿಖೆಗೆ ಆಗ್ರಹಿಸಿ ನ್ಯಾಯಾಂಗ ಇಲಾಖೆಗೆ ಪತ್ರ ಬರೆದಿದ್ದರು.

Leave a Comment

Your email address will not be published. Required fields are marked *