Ad Widget .

ಪುಷ್ಪ 2ನ ಪೋಸ್ಟರ್‌ಗೆ ಮೋದಿ ಐಕಾನ್ ಲುಕ್ ಕೊಟ್ಟ ಫೋಟೋ ವೈರಲ್‌

ಸಮಗ್ರ ನ್ಯೂಸ್‌ : ಲೋಕಸಭಾ ಚುನಾವಣೆಯ ಪ್ರಚಾರದ ಜೋರಾಗಿದ್ದು, ರಾಜಕೀಯ ನಾಯಕರು, ಅಭ್ಯರ್ಥಿಗಳು ದೇಶಾದ್ಯಂತ ಮತಯಾಚನೆ ನಡೆಸುತ್ತಿದ್ದಾರೆ. ಅಖಾಡದಲ್ಲಿ ಬೃಹತ್ ಸಮಾವೇಶಗಳು ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಲೋಕಸಭಾ ಚುನಾವಣೆಯ ಹವಾ ಹೇಗಿದೆ ಅನ್ನೋದಕ್ಕೆ ಪ್ರಧಾನಿ ನರೇಂದ್ರ ಮೋದಿ ಫೋಟೋಗೆ ಅವರ ಅಭಿಮಾನಿಗಳು ಪುಷ್ಪ ಟಚ್‌ ಕೊಟ್ಟಿದ್ದು, ಫೋಟೋ ಸಖತ್ ವೈರಲ್ ಆಗಿದೆ.

Ad Widget . Ad Widget .

ಇತ್ತೀಚಿಗೆ ತೆಲುಗಿನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಪುಷ್ಪ 2 ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿತ್ತು. ಅದೇ ಪೋಸ್ಟರ್‌ ಅನ್ನ ಬಳಸಿಕೊಂಡಿರುವ ಮೋದಿ ಅಭಿಮಾನಿಗಳು ಪ್ರಧಾನಿ ಮೋದಿ ಅವರಿಗೆ ಐಕಾನ್ ಲುಕ್ ಕೊಟ್ಟು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Ad Widget . Ad Widget .

ಪುಷ್ಪ 2 ರೀತಿಯ ಹೊಸ ಪೋಸ್ಟರ್‌ ಅನ್ನು ಮೋದಿ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ. ಪುಷ್ಪ 2ನ ಅಲ್ಲು ಅರ್ಜುನ್ ಪೋಸ್ಟರ್‌ಗೆ ನರೇಂದ್ರ ಮೋದಿ ಅವರ ಮುಖ ಹಾಕಿ ಫೇಕ್ ಮಾಡಲಾಗಿದೆ. ಐಕಾನ್ ಸ್ಟಾರ್ ಆಗಿ ನರೇಂದ್ರ ದಾಮೋದರ್ ದಾಸ್ ಮೋದಿ ಎಂದು ಪರಿಚಯ ಎನ್ನಲಾಗಿದೆ. ಪುಷ್ಪ ಬದಲು ಭಾಜ್ಪ 2 ದಿ ರೂಲ್ ಅನ್ನೋ ಖಡಕ್‌ ಕ್ಯಾಪ್ಶನ್‌ ಕೊಡಲಾಗಿದೆ.

Leave a Comment

Your email address will not be published. Required fields are marked *