Ad Widget .

ಮಡಿಕೇರಿ: ಮನೆಯಿಂದಲೆ ಮತದಾನ| ಶೇ.41 ರಷ್ಟು ಸಾಧನೆ

ಸಮಗ್ರ ನ್ಯೂಸ್: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ ವಯಸ್ಸು 85 ಮೀರಿರುವ ಹಿರಿಯ ನಾಗರೀಕರು(ಎವಿಎಸ್‍ಸಿ), ವಿಕಲಚೇತನರು (ಎವಿಪಿಡಿ) ಮತ್ತು ಕೋವಿಡ್ ಶಂಕಿತ/ಬಾಧಿತ ವ್ಯಕ್ತಿಗಳನ್ನು (ಎವಿಸಿಒ) ಮತ್ತು ಅಗತ್ಯ ಸೇವೆಗಳ ಮೇರೆ ನಿಯೋಜನೆಗೊಂಡಿರುವ (ಎವಿಇಎಸ್) ವ್ಯಕ್ತಿಗಳನ್ನು ಗೈರು ಹಾಜರಿ ಮತದಾರರು ಎಂದು ಪರಿಗಣಿಸಲಾಗುತ್ತದೆ. ಈ ಗೈರು ಹಾಜರಿ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದೆಂಬುದನ್ನು ಗಮನದಲ್ಲಿರಿಸಿ ಇವರುಗಳಿಗೆ ಮನೆಯಿಂದಲೆ ಮತದಾನ (ಹೋಮ್ ವೋಟಿಂಗ್) ಮಾಡುವ ಸೌಲಭ್ಯ ಕರ್ಣಾಟಕ ಸರಕಾರವು ಕಲ್ಪಿಸಲಾಗಿರುತ್ತದೆ.

Ad Widget . Ad Widget .

ಅದರಂತೆ ಮನೆಯಿಂದಲೆ ಮತದಾನ(ಹೋಮ್ ವೋಟಿಂಗ್) ಕಾರ್ಯಕ್ಕೆ ಇಬ್ಬರು ಮತಗಟ್ಟೆ ಅಧಿಕಾರಿಗಳು, ಒಬ್ಬರು ಮೈಕ್ರೋ ಅಬ್ಸರ್ವರ್, ಬಿಎಲ್‍ಓ, ವಿಡಿಯೋ ಗ್ರಾಫರ್ ಹಾಗೂ ಸೆಕ್ಟರ್ ಅಧಿಕಾರಿಗಳನ್ನೊಳಗೊಂಡ ತಂಡಗಳು ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 22 ಮಾರ್ಗಗಳಲ್ಲಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ 21 ಮಾರ್ಗಗಳಲ್ಲಿ ಏಪ್ರಿಲ್, 15, ಏ.16 ಮತ್ತು ಏ.17 ರಂದು ಮನೆ ಮನೆಗೆ ತೆರಳಿ ಗೈರು ಹಾಜರಿ ಮತದಾರರಿಂದ ಮತದಾನ ಮಾಡಿಸುವ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.

Ad Widget . Ad Widget .

ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ಪೈಕಿ ಗುರುತಿಸಲಾದ 5689 ಹಿರಿಯ ನಾಗರೀಕರ(ಎವಿಎಸ್‍ಸಿ) ಪೈಕಿ 1474 ಮಂದಿ 12ಡಿ ನಮೂನೆಯಲ್ಲಿ ಮನೆ ಮತದಾನ(ಹೋಮ್ ವೋಟಿಂಗ್) ಗೆ ಆಯ್ಕೆ ಮಾಡಿಕೊಂಡಿದ್ದು, ಈ ಪೈಕಿ 601 ಮತ ಚಲಾವಣೆ ಆಗಿದ್ದು, ಶೇ.40.77 ರಷ್ಟು ಮತದಾನವಾಗಿರುತ್ತದೆ.

ವಿಕಲಚೇತನ(ಎವಿಪಿಡಿ) ಮತದಾರರ ಪೈಕಿ ಗುರುತಿಸಲಾದ 4383 ಮತದಾರರಲ್ಲಿ 643 ಮಂದಿ 12ಡಿ ನಮೂನೆಯಲ್ಲಿ ಹೋಮ್ ವೋಟಿಂಗ್‍ಗೆ ಆಯ್ಕೆ ಮಾಡಿಕೊಂಡಿದ್ದು, ಈ ಪೈಕಿ 264 ಮತ ಚಲಾವಣೆ ಆಗಿದ್ದು, ಶೇ. 41.06 ರಷ್ಟು ಮತದಾನವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *