Ad Widget .

ಧಾರವಾಡ:18 ಕೋಟಿ ಹಣ ಪತ್ತೆ|ಐಟಿ ಅಧಿಕಾರಿಗಳು ಎಸ್‌ಬಿಐಗೆ ಹಣ ರವಾನೆ

ಸಮಗ್ರ ನ್ಯೂಸ್‌ : ದಾಸನಕೊಪ್ಪ ಸರ್ಕಲ್ ಬಳಿ ಇರುವ ಅರ್ನಾ ಅಪಾರ್ಟ್‌ಮೆಂಟ್‌ನಲ್ಲಿರುವ ಯು.ಬಿ.ಶೆಟ್ಟಿ ಅವರ ಅಕೌಂಟೆಂಟ್ ಬಸವರಾಜ ದತ್ತುರವರ ಅವರ ಮನೆಯಲ್ಲಿ ಜಪ್ತಿ ಮಾಡಲಾದ 18 ಕೋಟಿ ರೂ. ಹಣವನ್ನು ಐಟಿ ಅಧಿಕಾರಿಗಳು ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ರವಾನಿಸಿರುವ ಘಟನೆ ನಡೆದಿದೆ.

Ad Widget . Ad Widget .

ಚುನಾವಣಾ ವಿಚಕ್ಷಣಾ ದಳದ ಅಧಿಕಾರಿಗಳು ಬಸವರಾಜ ದತ್ತುನವರ ಅವರ ಮನೆಯಲ್ಲಿ ಮದ್ಯ ಶೇಖರಿಸಿ ಇಡಲಾಗಿದೆ ಎಂಬ ಶಂಕೆ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಅವರ ಮನೆಯಲ್ಲಿ 18 ಕೋಟಿ ರೂ. ಬೃಹತ್ ಮೊತ್ತದ ಹಣ ಪತ್ತೆಯಾಗಿತ್ತು. ಕೂಡಲೇ ಈ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿತ್ತು.

Ad Widget . Ad Widget .

20 ಜನ ಅಧಿಕಾರಿಗಳು ದತ್ತುನವರ ಮನೆಯಲ್ಲಿ ನಿನ್ನೆ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಮಶಿನ್ ಮುಖಾಂತರ ಹಣ ಎಣಿಕೆ ಮಾಡಿದ್ದಾರೆ. ಇಂದು ಮಧ್ಯಾಹ್ನದವರೆಗೂ ಅಧಿಕಾರಿಗಳು ತಪಾಸಣೆ ನಡೆಸಿ 18 ಕೋಟಿ ರೂ. ಹಣವನ್ನು 18 ಬ್ಯಾಗ್‌ಗಳಲ್ಲಿ ತುಂಬಿ ಪೊಲೀಸ್ ಭದ್ರತೆ ಮಧ್ಯೆ ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಸಾಗಿಸಿದ್ದಾರೆ.

ಬಸವರಾಜ ದತ್ತುನವರ ತಾನು ಯು.ಬಿ.ಶೆಟ್ಟಿ ಅವರ ಅಕೌಂಟೆಂಟ್ ಎಂದು ಹೇಳಿಕೊಂಡಿದ್ದರಿಂದ ಐಟಿ ಅಧಿಕಾರಿಗಳು ಶೆಟ್ಟಿ ಅವರ ಕಚೇರಿ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಬುಧವಾರ ಮಧ್ಯಾಹ್ನ 2 ಗಂಟೆವರೆಗೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿ ಎರಡು ಪೊಲೀಸ್ ಎಸ್ಕಾರ್ಟ್ ವಾಹನದ ಸಮೇತ ಭದ್ರತೆಯೊಂದಿಗೆ 18 ಕೋಟಿ ಹಣವನ್ನು 18 ಬ್ಯಾಗ್‌ಗಳಲ್ಲಿ ತುಂಬಿಕೊಂಡು ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ರವಾನಿಸಿದ್ದಾರೆ.

Leave a Comment

Your email address will not be published. Required fields are marked *