Ad Widget .

ವರ್ಷದ ಮೊದಲ ಮಳೆ ಆಗಿದ್ದು ಯಾವ ಜಿಲ್ಲೆಯಲ್ಲಿ? ಇಲ್ಲಿದೆ ನೋಡಿ ವೆದರ್ ಅಪ್ಡೇಟ್

ಸಮಗ್ರ ನ್ಯೂಸ್: ಹವಾಮಾನ ತಜ್ಞರು ಮಾರ್ಚ್ 20ರ ಬಳಿಕ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ಕುರಿತು ಮುನ್ಸೂಚನೆಯನ್ನು ನೀಡಿದ್ದರು. ಆದರೆ ಅದಕ್ಕೂ ಮೊದಲೇ ದಕ್ಷಿಣ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಕೊಂಚ ಮಳೆಯಾಗಿದೆ.

Ad Widget . Ad Widget .

ಬಿರು ಬೇಸಿಗೆಯ ನಡುವೆ ರಾಜ್ಯದ ಜನರಿಗೆ ಸಂತಸದ ಸುದ್ದಿಯೊಂದು ಇಲ್ಲಿದೆ. ಈ ವರ್ಷದ ಮೊದಲ ಮಳೆಗೆ ಕರ್ನಾಟಕ ಸಾಕ್ಷಿಯಾಗಿದೆ. ಈ ಕುರಿತು ಮಾಹಿತಿ ನಿಮಗೆಂದೇ ಇಲ್ಲಿದೆ. ದಕ್ಷಿಣ ಕರ್ನಾಟಕದ ಹಲವು ಗ್ರಾಮಗಳಲ್ಲಿ ಬುಧವಾರ 2024 ರ ಮೊದಲ ಮಳೆ ದಾಖಲಾಗಿದೆ. ಮೈಸೂರು ಮತ್ತು ಕೊಡಗು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸ್ವಲ್ಪ ಪ್ರಮಾಣದ ತುಂತುರು ಮಳೆಯಾಗಿದ್ದು, ತಾಪಮಾನ ಕಡಿಮೆಯಾಗಿದೆ.

Ad Widget . Ad Widget .

ವಿರಾಜಪೇಟೆ ತಾಲೂಕಿನ ಕಾಕೋಟ್ ಪರಂಬು ಗ್ರಾಮದಲ್ಲಿ ಮಾರ್ಚ್ 13ರಂದು 3.5 ಮಿ.ಮೀ ಮಳೆ ದಾಖಲಾಗಿದೆ. ಮೈಸೂರು ಜಿಲ್ಲೆಯ ನಂಜಗೂಡು ತಾಲೂಕಿನ ಶಿರಮಳ್ಳಿಯಲ್ಲಿ 2.5ಮಿ.ಮೀ ಮಳೆಯಾಗಿದ್ದು, ಹಗಿನವಾಳು ಗ್ರಾಮದಲ್ಲಿ 1ಮಿ.ಮೀ ತುಂತುರು ಮಳೆ ದಾಖಲಾಗಿದೆ.

ಹವಾಮಾನ ತಜ್ಞರು ಮಾರ್ಚ್ 20ರ ಬಳಿಕ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ಕುರಿತು ಮುನ್ಸೂಚನೆಯನ್ನು ನೀಡಿದ್ದರು. ಆದರೆ ಅದಕ್ಕೂ ಮೊದಲೇ ದಕ್ಷಿಣ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಕೊಂಚ ಮಳೆಯಾಗಿದೆ.

ಮುುಂದಿನ 48 ಗಂಟೆಗಳಲ್ಲಿಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ವರೆಗೂ ಹೆಚ್ಚಾಗುವ ಸಾಧ್ಯತೆಯಿದೆ. ಮಾರ್ಚ್ ಅಂತ್ಯದ ವೇಳೆಗೆ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಾಧ್ಯತೆ ಎಂದು ಹವಾಮಾನ ತಜ್ಞ ಸಿಎಸ್ ಪಾಟೀಲ ಅವರು ತಿಳಿಸಿದ್ದಾರೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳದಿಂದ ಸಾರ್ವಜನಿಕರು ಪರಿತಪಿಸುತ್ತಿದ್ದಾರೆ. ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ಆದರೆ ಈ ವರ್ಷ ಎಲ್ ನಿನೋದ ಪರಿಣಾಮದಿಂದ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಪರಿಣಿತರು ಅಂದಾಜಿಸಿದ್ದಾರೆ.

Leave a Comment

Your email address will not be published. Required fields are marked *