Ad Widget .

ಉಡುಪಿ : ಏ. 17ರಿಂದ ಉಡುಪಿ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ಸಂಚಾರಕ್ಕೆ ಮುಕ್ತ -ಯಶ್ ಪಾಲ್ ಸುವರ್ಣ

ಸಮಗ್ರ ನ್ಯೂಸ್‌ : ರಾಷ್ಟೀಯ ಹೆದ್ದಾರಿ 66 ಉಡುಪಿ ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿಯ ಒಂದು ಭಾಗ ಪೂರ್ಣಗೊಂಡಿದ್ದು ಏಪ್ರಿಲ್ 17 ರಿಂದ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.

Ad Widget . Ad Widget .

ಈ ಹಿಂದಿನ ರಾಷ್ಟೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಸಂತೆಕಟ್ಟೆಯಲ್ಲಿ ನಿತ್ಯ ವಾಹನ ದಟ್ಟಣೆಯಿಂದ ನಿತ್ಯ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದ್ದು, ಸಂಸದೆ ಶೋಭಾ ಕರಂದ್ಲಾಜೆಯವರು ಆದ್ಯತೆಯ ಮೇರೆಗೆ ಅಂಡರ್ ಪಾಸ್ ಕಾಮಗಾರಿ ಮಂಜೂರು ಮಾಡಿ ಇದೀಗ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ.

Ad Widget . Ad Widget .

ಅಂಡರ್ ಪಾಸ್ ರಸ್ತೆಯಿಂದ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಸಮಸ್ಯೆ ಪರಿಹಾರವಾಗಲಿದ್ದು, ಶೀಘ್ರದಲ್ಲೇ ಇನ್ನೊಂದು ಭಾಗದ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *