Ad Widget .

ಶಾರ್ಟ್ ಸರ್ಕ್ಯೂಟ್​​ಗೆ ನಾಲ್ಕುವರೆ ವರ್ಷದ ಮಗು ಬಲಿ| ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಸಮಗ್ರ ನ್ಯೂಸ್: ಬೆಂಗಳೂರಿನ ಸುಲ್ತಾನ್ ಪಾಳ್ಯ ಅಪಾರ್ಟ್​​ಮೆಂಟ್​​ನ ಕೊಠಡಿಯೊಂದರಲ್ಲಿ ಕಾಣಿಸಿಕೊಂಡ ಶಾರ್ಟ್ ಸರ್ಕ್ಯೂಟ್​​ಗೆ ನಾಲ್ಕುವರೆ ವರ್ಷದ ಗಂಡು ಮಗು ಅನೂಪ್ ಬಲಿಯಾಗಿದೆ.

Ad Widget . Ad Widget .

ಸುಲ್ತಾನ್ ಪಾಳ್ಯ ಬಳಿಯಿರುವ ರಿಯಾನ್ ವುಡ್ ಅಪಾರ್ಟ್​ಮೆಂಟ್​​ನ ನಾಲ್ಕನೇ‌ ಮಹಡಿಯಲ್ಲಿರುವ ಮನೆಯೊಂದರಲ್ಲಿ ನೇಪಾಳ ಮೂಲದ ಪೂರಾನ್ ಖಂಡಕ್‌ ಹಾಗೂ ಇವರ ಪತ್ನಿ ಲಕ್ಷ್ಮೀ ವಾಸವಿದ್ದರು. ಘಟನೆ ನಡೆದ ಅಪಾರ್ಟ್​​ಮೆಂಟ್​​ನಲ್ಲಿ ಮಗುವಿನ ತಂದೆ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದರೆ, ತಾಯಿ ಸಹ ಅಪಾರ್ಟ್​ಮೆಂಟ್​​ನಲ್ಲಿ ಹೌಸ್‌ ಕೀಪಿಂಗ್ ಆಗಿ ಕೆಲಸ‌ ಮಾಡುತ್ತಿದ್ದರು.

Ad Widget . Ad Widget .

ಇವರು ನಿತ್ಯ ಮಧ್ಯಾಹ್ನ ಮಗುವನ್ನ ಮಲಗಿಸಿ ಡೋರ್ ಲಾಕ್ ಹಾಕಿ ದಂಪತಿ ತಮ್ಮ ಹೊರಗಿನ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ನಿನ್ನೆಯೂ ಸಹ ಮಗುವನ್ನು ಮಲಗಿಸಿ ಫ್ಯಾನ್ ಹಾಕಿ ಡೋರ್ ಲಾಕ್‌ ಮಾಡಿಕೊಂಡು ಬಂದಿದ್ದರು. ಕೆಲಸ ಮುಗಿಸಿಕೊಂಡು ಪೋಷಕರು ಮನೆಗೆ ಹೋದಾಗ ಶಾಕ್ ಎದುರಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಮನೆಯಲ್ಲಿದ್ದ ವಸ್ತುಗಳ ಜೊತೆ ಮಗುವು ಸುಟ್ಟು ಕರಕಲಾಗಿತ್ತು. ಇದನ್ನ ಕಂಡ ದಂಪತಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಆದರೆ ಅಗ್ನಿಶಾಮಕ ದಳದವರು ಬರುವಷ್ಟರಲ್ಲಿ ಮಗು ಮೃತ ಪಟ್ಟಿತ್ತು. ಈ ಘಟನೆ ಸಂಬಂಧ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *