ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಎದುರು ಬಿಜೆಪಿ ಅಭ್ಯರ್ಥಿ ಠುಸ್ ಆಗಿದೆ. ಪದ್ಮರಾಜ್ ಅಬ್ಬರದ ಎದುರು ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಂಕಾಗಿದ್ದಾರೆ. ಇದೆ ಕಾರಣಕ್ಕೆ ಬಿಜೆಪಿ ಮೋದಿಯವರನ್ನು ಕರೆತಂದು ರೋಡ್ ಶೋ ನಡೆಸಿದ್ದಾರೆ ಎನ್ನಲಾಗಿದೆ.
ರಾಜಕೀಯ ನಿಷ್ಣಾತರ ಪ್ರಕಾರ ಮಂಗಳೂರಿನಲ್ಲಿ ಪದ್ಮ ರಾಜ್ V/S ಬ್ರಿಜೇಶ್ ಬದಲು ಪದ್ಮರಾಜ್ ಪೂಜಾರಿ V/S ನರೇಂದ್ರ ಮೋದಿ ಅನ್ನೋ ವಾತಾವರಣ ನಿರ್ಮಾಣವಾಗಿದೆ. ಇನ್ನೂ ಮೋದಿ ಬಂದ ಮೇಲೆಯೇ ಬಿಜೆಪಿ ಅಭ್ಯರ್ಥಿಯ ಭವಿಷ್ಯ ಬದಲಾಗಬಹುದು ಅನ್ನೋ ಲೆಕ್ಕಾಚಾರವಾಗಿದ್ದು, ಬಿಜೆಪಿಗರಿಗೆ ಬ್ರಿಜೇಶ್ ಚೌಟ ಪ್ರಚಾರ ಶೈಲಿಯೇ ತಲೆನೋವಾಗಿದೆ.
ದ.ಕ ಕ್ಷೇತ್ರದಾದ್ಯಂತ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯರದ್ದೇ ಸದ್ದು ಜೋರಾಗಿದೆ. ಹೋದಲ್ಲಿ ಬಂದಲ್ಲಿ ಪದ್ಮರಾಜ್ ಹವಾ ಎದ್ದು ಕಾಣುತ್ತಿದೆ. ದಿನಕ್ಕೊಂದು ರೋಡ್ ಶೋ, ಪ್ರಚಾರ ಸಭೆಗಳನ್ನು ನಡೆಸುತ್ತಾ ಗೆದ್ದೇ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್.
ಈ ನಡುವೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಎಲ್ಲಿದ್ದಾರೆ?ಎಂದು ದಕ್ಷಿಣ ಕನ್ನಡದ ಜನ ಕೇಳುತ್ತಿದ್ದಾರೆ. ಅಬ್ಬರದ ಪ್ರಚಾರವಿಲ್ಲ, ಬಿರುಸಿನ ಮತ ಬೇಟೆಯಿಲ್ಲ, ಚುನಾವಣೆ ಹೊತ್ತಲ್ಲೇ ಚೌಟ ಮಂಕಾಗಿದ್ದಾರೆ. ಇದೆ ಪರಿಸ್ಥಿತಿ ಮುಂದುವರೆದರೆ ಚೌಟ ಗೆಲುವಿನ ಗತಿಯೇನು?. ಬಿಜೆಪಿ ಅಭ್ಯರ್ಥಿಯ ಪ್ರಚಾರದ ಶೈಲಿಯಿಂದ ಕಾರ್ಯಕರ್ತರಿಗೂ ನಿರುತ್ಸಾಹ ಬಂದಿದೆ.
ಹೀಗಾಗಿ ಕೇವಲ ಮೋದಿ ಹಾಗು ಕೇಂದ್ರದ ನಾಯಕತ್ವವನ್ನೇ ಕ್ಯಾಪ್ಟನ್ ಅವಲಂಬಿಸಿಕೊಂಡಿದ್ದಾರೆ. ಕ್ಯಾಪ್ಟನ್ ಉತ್ಸಾಹದಿಂದ ಮತಬೇಟೆ ನಡೆಸದೆ ಹೋದರೆ ಗೆಲುವು ಕಷ್ಟ ಸಾಧ್ಯ ಅನ್ನುತ್ತಿದ್ದಾರೆ ರಾಜಕೀಯ ಪಂಡಿತರು.