ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಯ ವೇಳೆ ನಡೆಯುವ ಅಕ್ರಮಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣು ಇರಿಸಿದ್ದು, ಚುನಾವಣಾ ದಿನಾಂಕ ಘೋಷಣೆಯಾದ ದಿನದಿಂದ ಇಲ್ಲಿಯ ತನಕ ದೇಶದಲ್ಲಿ ಬರೋಬ್ಬರಿ 4,650 ಕೋಟಿ ರು. ಮೌಲ್ಯದ ವಸ್ತುಗಳು ಹಾಗೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇದು ದೇಶದ 75 ವರ್ಷದ ಚುನಾವಣಾ ಇತಿಹಾಸದಲ್ಲೇ ದಾಖಲೆಯಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ. ಈ ಒಟ್ಟು ಅಕ್ರಮದಲ್ಲಿ 2069 ಕೋಟಿ ರು. ಮೌಲ್ಯದ ಮಾದಕ ವಸ್ತುಗಳು (ಡ್ರಗ್ಸ್) ಕೂಡ ಸೇರಿವೆ ಎಂದು ಅದು ಹೇಳಿದೆ.
2019ರ ಚುನಾವಣೆಯಲ್ಲಿ ಆಯೋಗ ಮಾ.1ರಿಂದ ಇಡೀ ಚುನಾವಣಾ ಪ್ರಕ್ರಿಯೆ ಮುಗಿವತನಕ 3,475 ಕೋಟಿ ರು. ವಶಪಡಿಸಿಕೊಂಡಿತ್ತು. ಆದರೆ ಈ ಬಾರಿ ಅದಕ್ಕಿಂತಲೂ ಜಾಸ್ತಿ ಅಕ್ರಮವು (ಸುಮಾರು 1200 ಕೋಟಿ ರು. ಮೌಲ್ಯ) ಜಪ್ತಿ ಆಗಿದೆ. ಮಾರ್ಚ್ 1 ರಿಂದ ಇಲ್ಲಿಯ ತನಕ ನಿತ್ಯ ಸರಾಸರಿ 100 ಕೋಟಿ ರು.ನಷ್ಟು ಅಕ್ರಮ ಸಂಪತ್ತನ್ನು ಸಿಬ್ಬಂದಿಗಳು ದೇಶದಲ್ಲಿ ಪಡಿಸಿಕೊಂಡಿದ್ದಾರೆ ಎಂದು ಆಯೋಗ ಮಾಹಿತಿ ನೀಡಿದೆ.