Ad Widget .

ವೋಟರ್ ಸ್ಲಿಪ್‍ಗಳಲ್ಲಿ ಮತಗಟ್ಟೆಯ ಕ್ಯೂಆರ್ ಕೋಡ್/ ಚುನಾವಣಾ ಆಯೋಗದ ನೂತನ ಪ್ರಯೋಗ

ಸಮಗ್ರ ನ್ಯೂಸ್: ಬೆಂಗಳೂರು ಸೇರಿದಂತೆ ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮತಗಟ್ಟೆಯನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುವಂತೆ ಮನೆ ಮನೆಗೆ ಹಂಚುವ ವೋಟರ್ ಸ್ಲಿಪ್‍ಗಳಲ್ಲಿ ಇದೇ ಮೊದಲ ಬಾರಿಗೆ ಮತಗಟ್ಟೆಯ ಕ್ಯೂಆರ್ ಕೋಡ್ ಮುದ್ರಿಸಲಾಗಿದೆ.

Ad Widget . Ad Widget .

ದೇಶದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಚುನಾವಣಾ ಆಯೋಗ ಮಾಡಿರುವ ಪ್ರಯೋಗ ಇದಾಗಿದ್ದು, ರಾಜ್ಯದ ನಗರ ಪ್ರದೇಶದ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಸೌಲಭ್ಯ ಜಾರಿಯಾಗಿದೆ. ನಗರದ ನಿವಾಸಿಗಳು ಕ್ಯೂಆರ್ ಕೋಡ್ ಮೂಲಕ ತಮ್ಮ ಮತಗಟ್ಟೆಯನ್ನು ಸುಲಭವಾಗಿ ತಲುಪಬಹುದಾಗಿದೆ. ಮತದಾರರ ಮಾಹಿತಿ ಚೀಟಿಯನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ನೋಂದಾಯಿತ ಎಲ್ಲ ಮತದಾರರಿಗೆ ಒದಗಿಸಲಾಗುತ್ತದೆ.

Ad Widget . Ad Widget .

ಮತದಾನ ಕೇಂದ್ರ, ದಿನಾಂಕ, ಸಮಯ ಮುಂತಾದ ಮಾಹಿತಿಯನ್ನು ಕ್ಯೂಆರ್ ಕೋಡ್ ಒಳಗೊಂಡಿರುತ್ತದೆ. ಆದರೆ ಮತದಾರರ ಭಾವಚಿತ್ರ ಇರುವುದಿಲ್ಲ. ಮತದಾರರ ಮಾಹಿತಿ ಚೀಟಿಯನ್ನು ಮತದಾರರ ಗುರುತಿನ ಪುರಾವೆ ಎಂದು ಪರಿಗಣಿಸುವುದಿಲ್ಲ. ಕೇಂದ್ರ ಚುನಾವಣಾ ಆಯೋಗ ನಿಗದಿ ಪಡಿಸಿದ ಮತದಾರರ ಗುರುತಿನ ಚೀಟಿ ಅಥವಾ ಕೇಂದ್ರ, ರಾಜ್ಯ ಸರ್ಕಾರ ನೀಡಿರುವ ಯಾವುದೇ ಇತರ ಗುರುತಿನ ಚೀಟಿಯನ್ನು ಬಳಸಬಹುದಾಗಿದೆ.

Leave a Comment

Your email address will not be published. Required fields are marked *