Ad Widget .

ಅಯೋಧ್ಯೆಯಲ್ಲಿ ರಾಮನವಮಿಯ ಸಂಭ್ರಮ/ ನಾಲ್ಕು ದಿವಸ ವಿಐಪಿ ದರ್ಶನ ನಿಷೇಧ

ಸಮಗ್ರ ನ್ಯೂಸ್: ರಾಮನವಮಿ ಪ್ರಯುಕ್ತ ಶ್ರೀರಾಮ ಮಂದಿರ ಟ್ರಸ್ಟ್ ವಿಶೇಷ ಮಾರ್ಗಸೂಚಿಯೊಂದನ್ನು ಹೊರಡಿಸಿದ್ದು, ಏಪ್ರಿಲ್ 15 ರಿಂದ 18 ರವರೆಗೆ ನವರಾತ್ರಿಯ ಸಂದರ್ಭದಲ್ಲಿ ನಾಲ್ಕು ದಿನಗಳ ಕಾಲ ಅಯೋಧ್ಯೆಯಲ್ಲಿ ವಿಐಪಿ ದರ್ಶನವನ್ನು ನಿಷೇಧಿಸಲಾಗಿದೆ.

Ad Widget . Ad Widget .

ಏಪ್ರಿಲ್ 15 ರಿಂದ ಏಪ್ರಿಲ್ 18 ರವರೆಗೆ ಆರತಿಗಾಗಿ ಭಕ್ತರಿಗೆ ಅನುಕೂಲಕರ ದರ್ಶನ ಅಥವಾ ವಿಐಪಿ ಪಾಸ್‍ಗಳು ಲಭ್ಯವಿರುವುದಿಲ್ಲ. ಇದರರ್ಥ ರಾಮ ನವಮಿಯಂದು ಸಾಮಾನ್ಯ ಮತ್ತು ವಿಶೇಷ ಭಕ್ತರ ದರ್ಶನದ ವ್ಯವಸ್ಥೆಯನ್ನು ಒಂದೇ ರೀತಿ ಇರಿಸಲಾಗಿದೆ. ಶ್ರೀರಾಮನು ಈ ನಾಲ್ಕು ದಿನಗಳಲ್ಲಿ ಎಲ್ಲಾ ಭಕ್ತರಿಗೆ ಒಂದೇ ರೀತಿಯ ದರ್ಶನವನ್ನು ನೀಡುತ್ತಾನೆ, ಯಾರಿಗೂ ವಿಶೇಷ ಉಪಚಾರವಿಲ್ಲ ಎಂದು ಹೇಳಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *