ಯಾದಗಿರಿ : ಮನೆಯಲ್ಲಿ ಯಾರು ಇಲ್ಲದಾಗ ನೇಣಿಗೆ ಶರಣಾದ ರೈತ

ಸಮಗ್ರ ನ್ಯೂಸ್‌ : ಸಾಲಬಾಧೆಯಿಂದ ಮನನೊಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರು ಗ್ರಾಮದಲ್ಲಿ ನಡೆದಿದೆ.

Ad Widget ... ..

ರೈತ ಶಾಂತಪ್ಪ ಉಪ್ಪಾರ್ (35) ಮೃತ ದುರ್ದೈವಿ.

Ad Widget

ಮನೆಯಲ್ಲಿ ಯಾರು ಇಲ್ಲದ ವೇಳೆ ಶಾಂತಪ್ಪ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಶಾಂತಪ್ಪ ಸುಮಾರು 2 ಲಕ್ಷ ರೂಪಾಯಿವರೆಗೂ ಕೈಸಾಲ ಮಾಡಿಕೊಂಡಿದ್ದರು. ತಂದೆ ಹೆಸರಿನಲ್ಲಿ 4 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದರು. ಆದರೆ ಬೆಳೆದ ತೊಗರಿ ಬೆಳೆ ಕೂಡ ಹಾನಿಯಾಗಿತ್ತು. ಸಾಲ ಪಾವತಿ ಮಾಡಲು ಎರಡು ಎತ್ತುಗಳನ್ನು ಕೂಡ ಮಾರಾಟ ಮಾಡಿದ್ದರು.

ಆದರೆ ಸಾಲಗಾರರ ಕಾಟಕ್ಕೆ ಬೇಸತ್ತು ಶಾಂತಪ್ಪ ಮನೆಯಲ್ಲೇ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಈ ಸಂಬಂಧ ಗುರುಮಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *