Ad Widget .

ಮೋದಿ ಗೆಲ್ಲಿಸಲು ಎಲ್ಲಿಗೆ ಕರೆದರೂ ನಾನು ಪ್ರಚಾರಕ್ಕೆ ಬರುವೆ: ಎಚ್ .ಡಿ ದೇವೆಗೌಡ

ಸಮಗ್ರ ನ್ಯೂಸ್: ಇಂದು ಮೈಸೂರಿನಲ್ಲಿ ಮೋದಿ ಸಮಾವೇಶ ನಡೆದಿದು, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು. ಈ ಸಂಧರ್ಭದಲ್ಲಿ ನರೇಂದ್ರ ಮೋದಿ ಅವರು ಈ ದೇಶ ಕಂಡ ಅತ್ಯಂತ ಯಶಸ್ವಿ ಪ್ರಧಾನಮಂತ್ರಿ ಎಂದು ಹಾಡಿಹೊಗಳಿರುವ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ತಾವು ರಾಜ್ಯದೆಲ್ಲೆಡೆ ಪ್ರಚಾರ ಮಾಡಲು ಸಿದ್ಧ ಎಂದು ಹೇಳಿದ್ದಾರೆ.

Ad Widget . Ad Widget .

ಇಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರೇ ನೀವು ಎಲ್ಲಿ ಕರೆದರೂ ನಾನು ಪ್ರಚಾರಕ್ಕೆ ಬರುತ್ತೇನೆ. ನರೇಂದ್ರ ಮೋದಿ ಅವರೇ, ಈ ರಾಜ್ಯದಿಂದ ಕನಿಷ್ಠ 24 ಸ್ಥಾನಗಳನ್ನು ಎನ್‌ಡಿಎದಿಂದ ಗೆದ್ದು ನಿಮಗೆ ಕೊಡುತ್ತೇವೆ. ಈ ದೇಶವನ್ನು ಆರ್ಥಿಕವಾಗಿ ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ತರುವ ನಿಮ್ಮ ಸಂಕಲ್ಪವನ್ನು ನನಸು ಮಾಡುವ ಸಂಬಂಧ ರಾಜ್ಯದಲ್ಲಿ ಹೆಚ್ಚಿನ ಸೀಟುಗಳನ್ನು ನಿಮಗೆ ಉಡುಗೊರೆಯಾಗಿ ಕೊಡುತ್ತೇವೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಭರವಸೆ ನೀಡಿದರು.

Ad Widget . Ad Widget .

ಜೊತೆಗೆ ನಾನು ಕಳೆದ 60 ವರ್ಷಗಳಿಂದ ರಾಜಕೀಯ ರಂಗದಲ್ಲಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯುತ್ತಮ ಆಡಳಿತವನ್ನು ನಡೆಸಿಕೊಂಡು ಬಂದಿದ್ದಾರೆ. ಎನ್‌ಡಿಎ ಜತೆ ಮೈತ್ರಿ ಮಾಡಿಕೊಳ್ಳುವಂತೆ ಎಚ್‌.ಡಿ. ಕುಮಾರಸ್ವಾಮಿಗೆ ಹೇಳಿದೆ. ದುಷ್ಟ ಕಾಂಗ್ರೆಸ್‌ ಅನ್ನು ಅಧಿಕಾರದಿಂದ ಹೊರಗಿಡಬೇಕು, ಮೋದಿಯಂಥ ದಕ್ಷ ಪ್ರಧಾನಿ ಆಡಳಿತ ಈ ದೇಶಕ್ಕೆ ಇನ್ನೂ ಬೇಕು ಎನ್ನುವುದು ನನ್ನ ಉದ್ದೇಶ. ಈ ದೇಶದ ಅಭಿವೃದ್ಧಿಯಾಗಬೇಕಾದರೆ ಎನ್‌ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ಆ ಕಾರಣಕ್ಕಾಗಿಯೇ ನಾನು ಈ ಬಾರಿ ಅವರೊಂದಿಗೆ ಕೈಜೋಡಿಸಿದ್ದೇನೆ ಎಂದು ಎಚ್‌.ಡಿ. ದೇವೇಗೌಡ ಹೇಳಿದರು. ಯಡಿಯೂರಪ್ಪನವರೇ ನೀವು ಎಲ್ಲಿಗೆ ಕರೆದರೂ ನಾನು ಪ್ರಚಾರಕ್ಕೆ ಬರುವುದ್ದಕ್ಕೆ ಸಿದ್ದ. 28ಕ್ಕೆ 28 ಕ್ಷೇತ್ರದಲ್ಲಿ ನಾನು ಪ್ರಚಾರ ಮಾಡಲು ಸಿದ್ದ ಎಂದು ಎಚ್. ಡಿ ದೇವೆಗೌಡ ಅವರು ಹೇಳಿದ್ದಾರೆ.

Leave a Comment

Your email address will not be published. Required fields are marked *