ಕೋಲಾರ:ಅರೆಸ್ಟ್ ಮಾಡಲು ಬಂದಾಗ ಹಲ್ಲೆಗೆ ಯತ್ನ-ಇಬ್ಬರು ಆರೋಪಿಗಳಿಗೆ ಫೈರಿಂಗ್ ಮಾಡಿದ ಪೊಲೀಸರು

ಸಮಗ್ರ ನ್ಯೂಸ್‌ : ಅರೆಸ್ಟ್ ಮಾಡಲು ಬಂದ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಕ್ಕೆ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಮಾಲೂರು ತಾಲೂಕಿನ ಸಿಗೊಂಡಹಳ್ಳಿ ಬಳಿ ನಡೆದಿದೆ.

Ad Widget ... ..

ಆರೋಪಿಗಳಾದ ಪ್ರಮೋದ್ ಮತ್ತು ಅನಿಲ್ ಎನ್ನುವರ ಮೇಲೆ ಫೈರಿಂಗ್ ಮಾಡಲಾಗಿದೆ.

Ad Widget

ಕೊಲೆ ಕೇಸ್ವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಇವರನ್ನು ಬಂಧಿಸುವ ವೇಳೆ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಣ ರಕ್ಷಣೆಗಾಗಿ ಕೋಲಾರದ ಮಾಸ್ತಿ ಇನ್ಸ್ಪೆಕ್ಟರ್ ರಾಮಪ್ಪ ಬಿ.ಗುತ್ತೇರ್ ಅವರು ಪ್ರಮೋದ್ ಮೇಲೆ ಫೈರಿಂಗ್ ಮಾಡಿದ್ರೆ, ಶ್ರೀನಿವಾಸಪುರ ಇನ್ಸ್ಪೆಕ್ಟರ್ ಗೊರವಿನಕೊಳ್ಳ ಅವರಿಂದ ಅನಿಲ್ ಮೇಲೆ ಗುಂಡು ಹಾರಿಸಿದ್ದಾರೆ.

ಕೋಲಾರದ ಮಾಲೂರು ತಾಲೂಕಿನ ಟೇಕಲ್ನಲ್ಲಿ ಲೋಕೇಶ್ ಎಂಬುವರನ್ನ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳಾದ ತಂದೆ ರಾಜಪ್ಪ, ತಾಯಿ ಜಯಮ್ಮ, ಇಬ್ಬರು ಮಕ್ಕಳಾದ‌ ಪ್ರಮೋದ್, ಅನಿಲ್ ಬಂಧನಕ್ಕೆಂದು ಬಂದಿದ್ದರು. ಇದೇ ವೇಳೆ ಆರೋಪಿಗಳು ಹಲ್ಲೆಗೆ ಮುಂದಾಗಿದ್ದಕ್ಕೆ ಪೊಲೀಸರು ಗುಂಡು ಹಾರಿಸಿದ್ದಾರೆ.

Leave a Comment

Your email address will not be published. Required fields are marked *