Ad Widget .

ಇಂದಿನಿಂದ ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ ಆರಂಭ

ಸಮಗ್ರ ನ್ಯೂಸ್: ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವ ಇಂದಿನಿಂದ ಆರಂಭವಾಗಿದು, ಇಂದಿನಿಂದ ಏಪ್ರಿಲ್ 23 ರ ವರೆಗೆ ಬೆಂಗಳೂರು ಕರಗ ಮಹೋತ್ಸವ ನಡೆಯಲಿದೆ. 13 ಬಾರಿ ಕರಗ ಹೊತ್ತಿರುವ ಪೂಜಾರಿ ಎ. ಜ್ಞಾನೇಂದ್ರ ಈ ಬಾರಿಯೂ ಕರಗ ಹೊರಲಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕರಗದ 9 ದಿನಗಳು ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದ್ದು, 20ರಂದು ಆರತಿ ದೀಪ ಬೆಳಗುವ ಕಾರ್ಯಕ್ರಮ ನಡೆಯಲಿದೆ. ಸಂಪಂಗಿ ಕೆರೆ ಅಂಗಳದ ಶಕ್ತಿ ಪೀಠದಲ್ಲಿ ಏ.21ರಂದು ರಾತ್ರಿ 3 ಗಂಟೆಗೆ ಹಸಿ ಕರಗ ನಡೆಯಲಿದೆ. 22ರಂದು ರಾತ್ರಿ 12 ಗಂಟೆಗೆ ಪೊಂಗಲು ಸೇವೆ (ಪುರಾಣ ಕಥನ) ಜತೆಗೆ 23ರಂದು ರಾತ್ರಿ 12.30ಕ್ಕೆ ಕರಗ ಶಕ್ತ್ಯೂ ತ್ಸವ ಮತ್ತು ಧರ್ಮರಾಯ ಸ್ವಾಮಿ ಮಹಾರಥೋತ್ಸವ ಜರುಗಲಿದೆ. 24ರಂದು ರಾತ್ರಿ 4ಗಂಟೆಗೆ ದೇವಸ್ಥಾನದಲ್ಲಿ ಗಾವು ಶಾಂತಿ ಕಾರ್ಯಕ್ರಮ ಮತ್ತು 25ರಂದು ವಸಂತೋತ್ಸವ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಸತೀಶ್‌ ಹೇಳಿದ್ದಾರೆ.

Ad Widget . Ad Widget . Ad Widget .

23ರಂದು ರಾತ್ರಿ 11.30ಕ್ಕೆ ರಥಗಳು ನಗರ್ತ ಪೇಟೆ, ದೊಡ್ಡ ಪೇಟೆ ಮೂಲಕ ಪ್ರಾತಃಕಾಲದ ವೇಳೆಗೆ ಶ್ರೀಕೃಷ್ಣರಾಜ ಮಾರ್ಕೆಟ್‌ ಚೌಕವನ್ನು ತಲುಪಿ ನಂತರ ದೇವಸ್ಥಾನ ತಲುಪಲಿದೆ.

ಇನ್ನೂ ಕರಗಕ್ಕೆ ಸೇಲಂ ಮೊಗ್ಗನ್ನು ಬಳಕೆ ಮಾಡುವುದು ರೂಢಿ. ಹೀಗಾಗಿ ಕರಗ ಮುಗಿಯುವವರೆಗೆ ಪ್ರತಿದಿನ ಸೇಲಂನಿಂದ ಮಲ್ಲಿಗೆ ಮೊಗ್ಗು ಬೆಂಗಳೂರಿಗೆ ಪೂರೈಕೆ ಆಗಲಿದೆ. ಮೈಸೂರು ಮಲ್ಲಿಗೆಯನ್ನೂ ಬಳಸಲಾಗುತ್ತದೆ. ಈ ಬಾರಿ ಕೇರಳದಿಂದ ಸಾಂಸ್ಕೃತಿಕ ತಂಡ ಕೂಡ ಆಗಮಿಸಲಿದೆ ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *