Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಸೂರ್ಯನು ಮೇಷ ರಾಶಿಗೆ ಸಂಚರಿಸಿದ್ದಾನೆ. ಶನಿಯು ಕುಂಭ ರಾಶಿಯಲ್ಲಿದೆ. ಶುಕ್ರ ಮೀನ ರಾಶಿಯಲ್ಲಿ, ರಾಹು ಮೀನ ರಾಶಿಯಲ್ಲಿದೆ, ಏಪ್ರಿಲ್ 9ಕ್ಕೆ ಬುಧ ಮೀನ ರಾಶಿಗೆ ಸಂಚರಿಸಿದೆ. ಗುರು ಮೇಷ ರಾಶಿಯಲ್ಲಿದೆ. ಈ ಎಲ್ಲಾ ಗ್ರಹಗಳ ಸಂಚಾರ ಈ ರಾಶಿಯವರಿಗೆ ಅನುಕೂಲಕರ ಸ್ಥಾನದಲ್ಲಿದ್ದು ಈ ವಾರದ ರಾಶಿಫಲ‌ ಯಾರಿಗೆ ಅದೃಷ್ಟದ ವಾರವಾಗಲಿದೆ ನೋಡಿ…

Ad Widget . Ad Widget .

ಮೇಷ ರಾಶಿ:
ಮೇಷ ರಾಶಿಗೆ ಅಧಿಪತಿ ಏಕದಶದಲ್ಲಿ ಕುಜನು ಹಾಗೂ ಶನಿ ಸಮಸ್ಯೆ ತರುತ್ತಾರೆಯೇ ಹೊರತು ಯಾವ ಶುಭ ನಿರ್ಧಾರ ಕೊಡಲು ಅವರಲ್ಲಿ ಬಲವಿಲ್ಲ. ಆದರೂ ಮೇ 1ರಿಂದ ಗುರು ದ್ವಿತೀಯಕ್ಕೆ ಬಂದ ಕೂಡಲೇ ನಿಮ್ಮನ್ನು ನೀವು ತಿದ್ದಿಕೊಂಡು ಸುಖವಾಗಿರಬಹುದು. ಹಯಗ್ರೀವ ದೇವರು, ಚಂಡಿಕೆಯನ್ನು ಪೂಜಿಸಿ. ಸಮಸ್ಯೆಗೆ ಪರಿಹಾರ ಸಿಗುತ್ತದೆ.

Ad Widget . Ad Widget .

ವೃಷಭ ರಾಶಿ:
14ನೇ ತಾರೀಕಿನಂದು ಮೇಷ ರಾಶಿಯಲ್ಲಿ ಸೂರ್ಯನು ಬಂದು ಕೆಲ ದ್ವಂದ್ವ ಅನುಭವ, ಅನಾರೋಗ್ಯ ಕಾಣಿಸಿಕೊಳ್ಳಬಹುದು. ಗುರು 12ರಲ್ಲಿ ಇರುವುದರಿಂದ ಸಮಸ್ಯೆ ವಿಪರೀತವಾಗಿ ನಿರ್ಧಾರಗಳಲ್ಲಿ ವೈಫಲ್ಯ ತೋರುತ್ತದೆ. ಈ ವಾರ ಉಮಾಮಹೇಶ್ವರನನ್ನು ಪೂಜಿಸಿ.

ಮಿಥುನ ರಾಶಿ:
ಈ ರಾಶಿಯವರಿಗೆ 14ನೇ ತಾರೀಕಿನಿಂದ ಸೂರ್ಯ ಗುರು ಒಟ್ಟಿಗೆ ಇದ್ದು ಒಳ್ಳೆಯ ಫಲ ನೀಡುತ್ತಾನೆ. ಸೂರ್ಯ ನಮಸ್ಕಾರ ಮಾಡಿ. ಅನಂತವಾಗಿ ಭವಾನಿ ಶಂಕರನನ್ನು ಆರಾಧಿಸಿ. ಸಮಸ್ಯೆಗಳಿಂದ ಆಚೆ ಬಂದು ಜಯವನ್ನು ಮೌನದಿಂದ ಶಾಂತಿಯನ್ನು ಗಳಿಸಬಹುದು.

ಕಟಕ ರಾಶಿ:
ದಶಮ ಗುರು ಏಕಾದಶಕ್ಕೆ ಬಂದು ಉಚ್ಛ ಸ್ಥಾನ ಫಲ ನೀಡುವುದರಲ್ಲಿ ಸಂದೇಹ ಬೇಡ. ಅಷ್ಟಮ ಶನಿ ಸ್ವಕ್ಷೇತ್ರದಲ್ಲಿ ಇದ್ದು ಕುಜನ ಜೊತೆ ಇರುವುದರಿಂದ ಯಾರೊಂದಿಗೂ ಚರ್ಚೆ ಬೇಡ. ಸರಿಯಾದ ರೀತಿಯಲ್ಲಿ ಗುರುವಿನ ಅನುಗ್ರಹ ಉಪಯೋಗಿಸಿಕೊಂಡು ದೇವರು ಕೊಟ್ಟ ಜೀವನ ಸಾರ್ಥಕ ಪಡಿಸಿಕೊಳ್ಳುವುದೇ ನಿಮ್ಮ ಧ್ಯೇಯವಾಗಿರಲಿ.

ಸಿಂಹ ರಾಶಿ:
ಗುರು ಬಲ ಇನ್ನು ಎರಡು ವಾರ ಕಾಲ ಇದ್ದು ಕೆಲವು ವಿಚಾರಗಳಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಸಂದೇಹ ಇಲ್ಲ. ಸಪ್ತಮದಲ್ಲಿ ಶನಿ ಇದ್ದು ಘರ್ಷಣೆ ಬೇಡ. ಶಾಂತಚಿತ್ತರಾಗಿ ದೇವರನ್ನು ಪ್ರಾರ್ಥಿಸಿ. ನಿಮ್ಮ ಸಮಯ ಉಪಯೋಗಿಸಿಕೊಂಡು ಸಾಧನೆ ತೋರಬಹುದು. ಆದಿತ್ಯ ಹೃದಯ ಪಾರಾಯಣ ಮಾಡಿ. ಗುರುವಿಗಾಗಿ ಮಲ್ಲಿಗೆ ಪುಷ್ಪದಲ್ಲಿ ಈಶ್ವರನನ್ನು ಪೂಜಿಸಿ.

ಕನ್ಯಾ ರಾಶಿ:
ಹಾಲಿನಲ್ಲಿ ಕೆನೆ ಕಟ್ಟುವುದು ನೋಡಿರುತ್ತೀರಿ. ದಪ್ಪ ಕೆನೆಯನ್ನು ಕಟ್ಟಿ ಹಾಲು ಬೀಗುತ್ತದೆ. ಎಚ್ಚರ ತಪ್ಪಿದರೆ ಹಾಲು ಉಕ್ಕಿ ಅಗ್ನಿ ನಂದಿಹೋಗಿ ಉಪಯೋಗ ಇಲ್ಲದಂತಾಗುತ್ತದೆ. ಇದನ್ನು ಅರ್ಥೈಸಿಕೊಂಡು ಅಷ್ಟಮ ಗುರುವನ್ನು ದಾಟಿ. ಮನೆಗೆ ಬಂದವರಿಗೆ ಗೋ ಕ್ಷೀರ ಕೊಟ್ಟು, ಮಾಡಿದ ಪಾಪ ಕಳೆದುಕೊಳ್ಳಿ. ಮುಂದಿನ ಸುಖ ಜೀವನಕ್ಕೆ ದಾರಿಯಾಗುತ್ತದೆ. ಗೋವಿನಂತೆ ಕೊಟ್ಟ ಮಾತನ್ನು ಮರೆಯದಿರಿ. ಪರೋಪಕಾರಿಗಳಾಗಿ ಬದುಕಿ.

ತುಲಾ ರಾಶಿ:
ಈ ರಾಶಿಯವರಿಗೆ ಧೈರ್ಯ, ದೈವಭಕ್ತಿಯೇ ದೊಡ್ಡ ಬಂಡವಾಳ. ದೇವರೊಬ್ಬ ಜತೆಗಿದ್ದರೆ ಚಾಟಿ ಇಲ್ಲದೆ ಕುದುರೆ ಓಡಿಸಬಹುದು. ಬುಗುರಿ ಆಡಿಸಬಹುದು. ನೀವು ಅಂಜಿ ನಡೆಯುವವರಲ್ಲ. ನಿಮಗೆ ಬೇಕಾಗಿರುವುದು ಹನುಮಂತನ ಅಂಜನದ ರಕ್ಷೆ. ಹಮ್ ಹನುಮತೆ ನಮಃ ಎಂಬ ನಾಮ ಜಪಿಸಿ. ಹನುಮಂತನು ಸಾಗರ ದಾಟಿ ಸೀತೆಯನ್ನು ಕಂಡು ಬಂದ ಮಹಾನುಭಾವ. ಹಾಗೆಯೇ ನಿಮ್ಮ ಕೆಲಸಗಳಲ್ಲಿ ಹನುಮಂತನಂತೆ ಧೈರ್ಯ ಇರಲಿ. ಇಷ್ಟ ದೇವರ ಪ್ರಾರ್ಥನೆ ಮಾಡಿ.

ವೃಶ್ಚಿಕ ರಾಶಿ:
ಚೇಳು ವಿಷಪೂರಿತ ಜಂತು. ಈ ರಾಶಿಯಲ್ಲಿ ಹುಟ್ಟಿದವರು ವಿಷಕ್ಕಾಗಲಿ, ಜಂತುವಿಗಾಗಲಿ ಹೆದರಬೇಕಿಲ್ಲ. ಹಾಗೆಯೇ ಎಂಥ ಪರಿಸ್ಥಿತಿಯಲ್ಲೂ ಹಣಕಾಸಿನ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸಿ. ಸಪ್ತಮದಲ್ಲಿ ಗುರು ಬರುವವರೆಗೂ ಋಣ ಪರಿಹಾರಕ್ಕಾಗಿ ಲಕ್ಷ್ಮಿನಾರಾಯಣನನ್ನು ಪ್ರಾರ್ಥಿಸಿ.

ಧನಸ್ಸು ರಾಶಿ:
ಈ ರಾಶಿಯವರು ಎಂದೂ ಸಮಸ್ಯೆ ಸೃಷ್ಟಿಸುವವರಲ್ಲ. ಪರಿಹಾರ ಹುಡುಕುವವರು. ಅದೇ ರಾಶಿಯ ಪೂರ್ವಾಷಾಢ ನಕ್ಷತ್ರಕ್ಕೆ ದೈತ್ಯ ಗುರು ಶುಕ್ರನು ಅಧಿಪತಿ. ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ಉಳಿಸುವುದು ಈ ರಾಶಿಯವರ ಕರ್ತವ್ಯ. ನೀವು ಸತ್ಯದ ಹಾದಿ ಹಿಡಿಯಿರಿ. 3ರ ಶನಿ 5ರ ಗುರು ನಿಮ್ಮ ಬೆಂಬಲಕ್ಕೆ ಇದ್ದಾರೆ. ಗಣೇಶನಂತೆ ನಿಮ್ಮ ತಂದೆ ತಾಯಿಯನ್ನು ಪೂಜಿಸಿ. ಎಲ್ಲದರಲ್ಲೂ ಗೆಲುವನ್ನು ಕಾಣುತ್ತೀರಿ.

ಮಕರ ರಾಶಿ:
ಮಕರ ಕುಂಭ ಅಧಿಪತಿ ಶನಿ 2ರಲ್ಲೂ ಇದ್ದು ಇನ್ನು ಎರಡು ವಾರ ಕಾಲ ಎಚ್ಚರಿಕೆಯಲ್ಲಿ ಸಾಗಿ. ಉತ್ತಮರ ಜತೆ ವ್ಯವಹಾರ, ಮೌನವನ್ನು ಧರಿಸಿ ಕುಲದೇವರನ್ನು ಪೂಜಿಸುವುದು ನಿಮ್ಮ ಆದ್ಯ ಕರ್ತವ್ಯ ಆಗಿರಲಿ. ಗುರುವು ಪಂಚಮಕ್ಕೆ ಬಂದಾಗ ನಿಮ್ಮ ಆಸೆ ಈಡೇರುತ್ತದೆ. ಅಂಬಾಭವಾನಿ ಸಹಿತ ಮಲಾನಿಕೇಶ್ವರನನ್ನು ಶೃಂಗೇರಿಯಲ್ಲಿ ಅರ್ಚಿಸಿ ಬನ್ನಿ, ಒಳ್ಳೆಯದಾಗುತ್ತದೆ.

ಕುಂಭ ರಾಶಿ:
ಕುಜ ಶನಿಯ ಸಂಘರ್ಷ. ಕುಟುಂಬದಲ್ಲಿ ಅಗ್ನಿ ಜ್ವಾಲೆಯಿಂದ ಸಮಸ್ಯೆ ಉಂಟಾಗಬಹುದು. ನಿಧಾನವಾಗಿ ಸಾಗಿ. ಕುಜನು ಕುಂಭ ರಾಶಿ ಬಿಟ್ಟ ಮೇಲೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಹಾವೇರಿಯಲ್ಲಿರುವ ಚಿದಂಬರ ಸ್ವಾಮಿಗಳಿಗೆ ಪ್ರಾತಃ ಕಾಲದಲ್ಲಿ ಪೂಜೆ ಮಾಡಿ ಬಂದರೆ ಬಹಳಷ್ಟು ಸಮಸ್ಯೆಗೆ ದೇವರೇ ಪರಿಹಾರ ಕೊಡುತ್ತಾನೆ.

ಮೀನ ರಾಶಿ:
ಮೀನ ರಾಶಿಗೆ ಸೂರ್ಯನು ಕೆಲ ಕಾಲ ಗುರುವನ್ನು ಸೇರುವುದರಿಂದ ತಾಪ ಕೋಪದಿಂದ ನಡವಳಿಕೆಯಲ್ಲಿ ಬದಲಾವಣೆ ಆಗಿ ನಿಮ್ಮನ್ನು ಶಾಂತ ಚಿತ್ತರಾಗಿ ಇಟ್ಟಿರುತ್ತಾನೆ. ಆದರೆ ಶುಕ್ರ ಬುಧರು ಬೇಡದ ಸಂಶಯ ಉಂಟು ಮಾಡಿ ಮನಸ್ಸನ್ನು ಹಾಳು ಮಾಡುತ್ತಾರೆ. ಭಯ, ಮಾಡುವ ಕೆಲಸದಲ್ಲಿ ಕೆಟ್ಟತನ, ದಿಕ್ಕು ಕಾಣದ ಸಮಯ ಉಂಟಾಗುತ್ತದೆ. ಅನ್ನಪೂರ್ಣೆಯ ಆರಾಧನೆಯಿಂದ ಶುಭವಾಗಲಿದೆ.

Leave a Comment

Your email address will not be published. Required fields are marked *