Ad Widget .

ನವದೆಹಲಿ: ಮುಂಬೈಗೆ ಬರುತ್ತಿದ್ದ ಇಸ್ರೇಲ್‌ ಮಾಲೀಕತ್ವದ ಹಡಗನ್ನು ವಶಪಡಿಸಿಕೊಂಡ ಇರಾನ್‌

ಸಮಗ್ರ ನ್ಯೂಸ್ : ಮುಂಬೈಗೆ ಬರುತ್ತಿದ್ದ ಇಸ್ರೇಲ್‌ ಮಾಲೀಕತ್ವದ ಸರಕು ಸಾಗಾಣೆ ಹಡಗನ್ನು ಇರಾನ್‌ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.

Ad Widget . Ad Widget .

ಯುಎಇಯಿಂದ ಸರಕು ತುಂಬಿಸಿಕೊಂಡು ಮುಂಬೈ ಬಂದರಿಗೆ ಬರುತ್ತಿದ್ದ ಕಂಟೈನರ್‌ ಶಿಪ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಡಗಿನಲ್ಲಿ 17 ಮಂದಿ ಭಾರತೀಯರಿದ್ದು ಇವರ ಬಿಡುಗಡೆ ಸಂಬಂಧ ಭಾರತ ಇರಾನ್‌ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಸರ್ಕಾರಿ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

Ad Widget . Ad Widget .

ಇಸ್ರೇಲ್‌ ಮೇಲೆ 48 ಗಂಟೆಯ ಒಳಗಡೆ ಇರಾನ್‌ ದಾಳಿ ನಡೆಸಬಹುದು ಎಂಬ ವರದಿಯ ಬೆನ್ನಲ್ಲೇ ಈ ಘಟನೆ ನಡೆದಿದೆ. ಪೋರ್ಚುಗೀಸ್‌ ಧ್ವಜ ಹೊಂದಿದ್ದ ಈ ಹಡಗಿನ ಮೇಲೆ ಇರಾನ್‌ ಸೈನಿಕರು ಹೆಲಿಕಾಪ್ಟರ್‌ನಿಂದ ನೇರವಾಗಿ ಇಳಿದು ದಾಳಿ ಮಾಡಿ ವಶ ಪಡಿಸಿದ್ದಾರೆ. ಈ ಹಡಗು ಇಸ್ರೇಲಿ ಬಿಲಿಯನೇರ್ ಇಯಾಲ್ ಆಫರ್ ಒಡೆತನದ ಲಂಡನ್ ಮೂಲದ ಜೊಡಿಯಾಕ್ ಮಾರಿಟೈಮ್‌ನೊಂದಿಗೆ ಕಂಪನಿಯೊಂದಿಗೆ ಸಂಯೋಜಿತವಾಗಿದೆ. ಈ ಹಡಗು ಏ.15ರ ರಾತ್ರಿ ಮುಂಬೈ ಬಂದರಿಗೆ ಆಗಮಿಸಬೇಕಿತ್ತು.

ಸೋವಿಯತ್ ಕಾಲ ಮಿಲ್ ಎಂಐ -17 ಹೆಲಿಕಾಪ್ಟರ್ ಬಳಸಿ ಈ ದಾಳಿ ಮಾಡಿದ್ದು, ಇದನ್ನು ಇರಾನಿನ ರೆವಲ್ಯೂಷನ್‌ ಗಾರ್ಡ್‌ ಮತ್ತು ಇರಾನ್ ಬೆಂಬಲಿತ ಯೆಮೆನ್ ಹೌತಿ ಬಂಡುಕೋರರು ಈ ಹಿಂದೆ ಬಳಸಿದ್ದರು.

ಮುಂದಿನ 48 ಗಂಟೆಗಳಲ್ಲಿ ಇಸ್ರೇಲ್‌ ಮೇಲೆ ಇರಾನ್‌ ದಾಳಿ ನಡೆಸಬಹುದು ಎಂದು ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿಯನ್ನು ಆಧಾರಿಸಿ ಶುಕ್ರವಾರ ಮಾಧ್ಯಮಗಳು ವರದಿ ಮಾಡಿದ್ದವು. ಏಪ್ರಿಲ್‌ 1 ರಂದು ಸಿರಿಯಾದಲ್ಲಿರುವ ಇರಾನ್‌ ರಾಯಭಾರ ಕಚೇರಿಯ ಮೇಲೆ ಬಾಂಬ್‌ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಕಮಾಂಡರ್‌ ಸೇರಿದಂತೆ 7 ಮಂದಿ ಇರಾನ್‌ ಮಿಲಿಟರಿ ಸಲಹೆಗಾರರು ಮೃತಪಟ್ಟಿದ್ದರು. ಈ ಏರ್‌ ಸ್ಟ್ರೈಕ್‌ ಅನ್ನು ಇಸ್ರೇಲ್‌ ಮಾಡಿದೆ ಎಂದು ಇರಾನ್‌ ದೂರಿದರೆ ಇಸ್ರೇಲ್‌ ಇಲ್ಲಿಯವರೆಗೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಈ ದಾಳಿಗೆ ಪ್ರತೀಕಾರವಾಗಿ ನಾವು ಇಸ್ರೇಲ್‌ ಮೇಲೆ ದಾಳಿ ಮಾಡುತ್ತೇವೆ ಎಂದು ಇರಾನ್‌ ಎಚ್ಚರಿಕೆ ನೀಡಿತ್ತು.

Leave a Comment

Your email address will not be published. Required fields are marked *