Ad Widget .

ಉಡುಪಿ: 6100 ಮತದಾರರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ – ಡಿಸಿ ಕೆ. ವಿದ್ಯಾಕುಮಾರಿ

ಸಮಗ್ರ ನ್ಯೂಸ್‌ : ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವಿಶೇಷ ಚೇತನರು ಹಾಗೂ 85 ವರ್ಷ ಮೇಲ್ಪಟ್ಟ ಮತದಾನ ಕೇಂದ್ರಗಳಿಗೆ ತೆರಳಿ ಮತದಾನ ಮಾಡಲು ಆಗದ 6100 ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಕೆ ತಿಳಿಸಿದರು.

Ad Widget . Ad Widget .

ಅವರು ಇಂದು ಕಾಪು ತಾಲೂಕಿನ ಕಲ್ಯಾ ಗ್ರಾಮದ ವಯಸ್ಕ ಮತದಾನರ ಮನೆಯಲ್ಲಿ ನಡೆದ ಮತದಾನದ ಪ್ರಕ್ರಿಯೆಯನ್ನು ಪರಿಶೀಲಿಸಿ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ವಿಶೇಷ ಚೇತನ ಹಾಗೂ 85 ವರ್ಷ ಮೇಲ್ಪಟ 4474, ಹಾಗೂ ಚಿಕ್ಕಮಗಳೂರು ಉಡುಪಿಯಲ್ಲಿ 1057 ವಯಸ್ಕ ಮತದಾರರು 216 ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 14 ರಿಂದ 16 ರವರೆಗೆ,

Ad Widget . Ad Widget .

ಕುಂದಾಪುರದಲ್ಲಿ 764 ವಯಸ್ಕ ಮತದಾರರು 197 ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 14 ರಿಂದ 16, ರವರೆಗೆ, ಕಾಪು ಕ್ಷೇತ್ರದಲ್ಲಿ 851 ವಯಸ್ಕ ಮತದಾರರು 250 ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 13 ರಿಂದ 15 ರವರೆಗೆ , ಕಾರ್ಕಳ ಕ್ಷೇತ್ರದಲ್ಲಿ 854 ವಯಸ್ಕ ಮತದಾರರು 285 ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 13 ರಿಂದ 15 ರವರೆಗೆ, ಚಿಕ್ಕಮಗಳೂರು 91 ವಯಸ್ಕ ಮತದಾರರು 28 ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 14 ರಿಂದ 16 ರವರೆಗೆ ,

ಮೂಡುಗೆರೆ ಯಲ್ಲಿ 237 ವಯಸ್ಕ ಮತದಾರರು 95 ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 15 ರಿಂದ 16 ರವರೆಗೆ, ತರಿಕೇರೆಯಲ್ಲಿ 309 ವಯಸ್ಕ ಮತದಾರರು 123 ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 15 ರಿಂದ 17 ರವರೆಗೆ, ಶೃಂಗೇರಿ ಯಲ್ಲಿ 501 ವಯಸ್ಕ ಮತದಾರರು 247 ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 15 ರಿಂದ 16 ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮನೆ ಮನೆ ಮತದಾನಕ್ಕೆ ಅಧಿಕಾರಿಗಳ ತಂಡದಲ್ಲಿ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಬಿ.ಎಲ್.ಓ. ಮೈಕ್ರೋ ವಿಕ್ಷಕರು ಸೇರಿದಂತೆ ಮತ್ತಿತರ ಸಿಬ್ಬಂದಿಗಳು ಇದ್ದಾರೆ ಮತದಾನ ಪೂರ್ತಿ ಪ್ರಕ್ರಿಯನ್ನು ವಿಡಿಯೋ ಚಿತ್ರಿಕರಣದ ಮೂಲಕ ನಡೆಯಲ್ಲಿದೆ ಗೌಪ್ಯ ಮತದಾನಕ್ಕೆ ಹೊತ್ತು ನೀಡಲಾಗುವುದು ಎಂದರು.

ಒಮ್ಮೆ ಮನೆಗೆ ಭೇಟಿ ನೀಡಿದಾಗ ಮನೆಯಿಂದಾಲೇ ಮತದಾನಕ್ಕೆ ಅವಕಾಶ ಕಲ್ಪಿಸುವ ಮತದಾರರು ಮನೆಯಲ್ಲಿ ಇಲ್ಲದೇ ಇದ್ದಲ್ಲಿ ಮತ್ತೊಂದು ಭಾರಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಎಂದ ಅವರು ಸಾಮಾನ್ಯವಾಗಿ ಮತದಾನಕ್ಕೆ ಅವಕಾಶ ಕಲ್ಪಿಸುವ ಸಮಯವನ್ನು ಬಿ.ಎಲ್.ಓ ಗಳು ಮುಂಚಿತವಾಗಿ ತಿಳಿಸಲಿದ್ದಾರೆ ಎಂದರು.

ಮತಗಟ್ಟೆ ಅಧಿಕಾರಿಗಳನ್ನು ಒಳಗೊಂಡ ತಂಡವು ಮತದಾನ ಮಾಡಲು ಅಗತ್ಯವಿರುವ ಸಾಮಾಗ್ರಿಗಳಾದ ಮತದಾರರ ಪಟ್ಟಿ, ಮತದಾನವನ್ನು ಗುರುತು ಮಾಡಲು ಪೆನ್ನು, ಇಂಕ್ ಪ್ಯಾಂಡ್ ವಿವಿಧ ನಮೂನೆಯ ಲಕೋಟೆಗಳು, ರಿಜಿಸ್ಟರ್ ಮತದಾನ ಕಂಪಾರ್ಟಮೆಂಟ್ ಸೇರಿದಂತೆ ಮತ್ತಿತರ ಅಗತ್ಯ ವಸ್ತುಗಳೊಂದಿಗೆ ತೆರಳುತ್ತಾರೆ ಎಂದು ಹೇಳಿದರು.

ಈ ವೇಳೆ ಕೊಪ್ಪ ತಾಲೂಕಿನ ತಹಸಿಲ್ದಾರ್ ಪ್ರತಿಭಾ, ಆರ್ ಹಾಗೂ ಮತಗಟ್ಟೆ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *