Ad Widget .

ಚುನಾವಣಾ ಯಾತ್ರೆ ವೇಳೆ ಆಂಧ್ರ ಸಿಎಂ ಜಗನ್ ಮೇಲೆ ಕಲ್ಲು ತೂರಾಟ

ಸಮಗ್ರ ನ್ಯೂಸ್: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಬಸ್ ಗೆ ಚುನಾವಣಾ ರ್ಯಾಲಿ ವೇಳೆ ಕೆಲವು ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಅವರ ಹಣೆಗೆ ಗಾಯಗಳಾಗಿದ್ದು, ಎಡ ಹುಬ್ಬಿನ ಬಳಿ ಗಾಯವಾಗಿದೆ. ಅವರಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಅವರು ತಮ್ಮ ಯಾತ್ರೆಯನ್ನು ಮುಂದುವರೆಸಿದ್ದಾರೆ. ಮುಖ್ಯಮಂತ್ರಿ ಮೇಲಿನ ದಾಳಿಗೆ ತೆಲುಗು ದೇಶಂ ಮತ್ತು ಅದರ ಮುಖ್ಯಸ್ಥ ಚಂದ್ರಬಾಬು ನಾಯ್ಡು ಕಾರಣ ಎಂದು ವೈಎಸ್ಆರ್​​ಸಿಪಿ ಪಕ್ಷ ಆರೋಪಿಸಿದೆ.

Ad Widget . Ad Widget .

ವಿಜಯವಾಡದ ಸಿಂಗ್ ನಗರದ ವಿವೇಕಾನಂದ ಶಾಲಾ ಕೇಂದ್ರದಲ್ಲಿ ಬಸ್ ಪ್ರವಾಸದ ಭಾಗವಾಗಿ ಜನಸಂದಣಿ ನಡುವೆ ಹೋಗುತ್ತಿದ್ದಾಗ ಕಲ್ಲು ಹೊಡೆಯಲಾಗಿದೆ ” ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ಹೇಳಿಕೆಯಲ್ಲಿ ತಿಳಿಸಿದೆ. ಕಲ್ಲು ವೇಗವಾಗಿ ಬಂದು ಸಿಎಂ ಹಣೆಗೆ ಹೊಡೆದರಿಂದ ಗಾಯಗಳಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *