ಸಮಗ್ರ ನ್ಯೂಸ್ : ಗಡಿಜಿಲ್ಲೆ ಚಾಮರಾಜನಗರ ಸಮೀಪದ ಹಾಸನೂರು ಅರಣ್ಯ ಇಲಾಖೆ ಚೆಕ್ಪೋಸ್ಟ್ ಗೆ ಕಾಡಾನೆಯೊಂದು ನುಗ್ಗಿ ದಾಳಿ ನಡೆಸುವ ಪ್ರಯತ್ನಕ್ಕೆ ಮುಂದಾದ ಘಟನೆ ನಡೆದಿದ್ದು ಕರ್ತವ್ಯ ನಿರತ ಸಿಬ್ಬಂದಿಗಳ ಸದ್ದಿಗೆ ಆನೆ ಸ್ಥಳದಿಂದ ಕಾಲ್ಕಿತ್ತಿದೆ.

ಹಾಸನೂರಿನ ಅರಣ್ಯ ಇಲಾಖೆ ಚೆಕ್ಪೋಸ್ಟ್ ಕಡೆ ನುಗ್ಗಿ ಬಂದ ಕಾಡಾನೆಯೊಂದು ದಾಳಿ ಮಾಡಲು ಯತ್ನಿಸಿ ಸಿಬ್ಬಂದಿಗಳನ್ನ ಕೆಲಕಾಲ ಆತಂಕಕ್ಕೆ ದೂಡಿತ್ತು, ಕಾಡಾನೆ ಚೆಕ್ಪೋಸ್ಟ್ ಕಡೆ ನುಗ್ಗಿ ಬಂದದನ್ನ ಅರಿತ ಸಿಬ್ಬಂದಿಗಳು ಕೂಗಿ ಸದ್ದು ಮಾಡಿದ್ದಾರೆ ಇದರಿಂದ ಗಾಬರಿಗೊಂಡ ಆನೆ ಅಲ್ಲಿಂದ ಕಾಲ್ಕಿತ್ತಿದೆ.