Ad Widget .

ಕಲಬುರಗಿ:ರಾಜ್ಯದ ಮುಖ್ಯಮಂತ್ರಿಯಾಗಿ ದತ್ತಾತ್ರೇಯ ದರ್ಶನಕ್ಕೆ‌ ಬರುವೆ ಎಂದ ಡಿಕೆಸಿ

ಸಮಗ್ರ ನ್ಯೂಸ್‌ : ಈ ಭಾಗದಲ್ಲಿ ದೇವಲ ಗಾಣಗಾಪುರ ದತ್ತ ಮಹಾರಾಜರ ದೇವಸ್ಥಾನ ಪವಿತ್ರವಾಗಿದ್ದು, ಅಪಾರ ಭಕ್ತರನ್ನು ಹೊಂದಿದ್ದಾರೆ. ಅದಕ್ಕಾಗಿ ಈ ದೇವಸ್ಥಾನವನ್ನು ಅಭಿವೃದ್ಧಿ ಮಾಡಲಾಗುವುದು, ತಾವೆಲ್ಲಾ ಅರ್ಚಕರು ನಾನು ಮುಖ್ಯಮಂತ್ರಿ ಆಗಿ ಬರಬೇಕೆಂದು ಆಶೀರ್ವಾದ ನೀಡಿ ಸನ್ಮಾನ ಮಾಡಿದ್ದೀರಿ.ಅದಕ್ಕೆ ದತ್ತಾತ್ರೇಯ ಮಹಾರಾಜರ ಆಶೀರ್ವಾದದಿಂದ ಮುಖ್ಯಮಂತ್ರಿಯಾದರೆ ಮತ್ತೊಮ್ಮೆ ದೇವಸ್ಥಾನಕ್ಕೆ ಬರುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

Ad Widget . Ad Widget .

ದೇವಲ ಗಾಣಗಾಪುರದ ದತ್ತಾತ್ರೇಯ ಮಹಾರಾಜರ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಅವರನ್ನು ಸನ್ಮಾನಿಸಿದ ಅರ್ಚಕರು ಮತ್ತೊಮ್ಮೆ ದೇವಲ ಗಾಣಗಾಪುರಕ್ಕೆ ಮುಖ್ಯಮಂತ್ರಿಯಾಗಿ ಬರಬೇಕು. ತಮಗೆ ದತ್ತಾತ್ರೇಯ ಮಹಾರಾಜರ ಆಶೀರ್ವಾದವಿದೆ ಎಂದರು.

Ad Widget . Ad Widget .

ಪೂಜಾ ಕೈಂಕರ್ಯವನ್ನು ಅರ್ಚಕರಾದ ಉದಯ ಭಟ್ ಪೂಜಾರಿ, ಪ್ರಸನ್ನ ಪಿ. ಪೂಜಾರಿ, ಗಂಗಾಧರ್ ಎಸ್.ಪೂಜಾರಿ, ಪ್ರಫುಲ್ ಪಿ.ಪೂಜಾರಿ, ದೇವಿದಾಸ್ ಎ.ಪೂಜಾರಿ ನೆರವೇರಿಸಿದರು.

Leave a Comment

Your email address will not be published. Required fields are marked *