Ad Widget .

ನಂಜನಗೂಡು: ಇಂದಿನಿಂದ ಏ.18 ರವರೆಗೆ ಮನೆಮನೆ ಮತದಾನ

ಸಮಗ್ರ ನ್ಯೂಸ್‌ : ಏ.13 ಇಂದಿನಿಂದ ಏ.18 ರವರೆಗೆ ಮನೆಮನೆ ಮತದಾನ ಪ್ರಕ್ರಿಯೆಗೆ ಇಂದು ಶನಿವಾರ ಚಾಲನೆ ನೀಡಲಾಗಿದೆ.

Ad Widget . Ad Widget .

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ನಂಜನಗೂಡು ನಗರದ ಗೌರಿ ಘಟ್ಟ ಬೀದಿಯಲ್ಲಿ ಚುನಾವಣಾ ಅಧಿಕಾರಿಗಳು ಮನೆ ಮನೆಗೆ ತೆರಳಿ ಮತದಾನ ಮಾಡಿಸಿದರು. ವರುಣ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮನೆ ಮತದಾನ ಪ್ರಕ್ರಿಯೆ ಪ್ರಾರಂಭ ಮಾಡಲಾಗಿದ್ದು, 85 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ ಅಂಗವಿಕಲರಿಗೆ ಮನೆ ಮನೆ ಮತದಾನ ನಡೆಸಲಾಗುತ್ತಿದೆ.

Ad Widget . Ad Widget .

ತಮ್ಮ ತಮ್ಮ ಮನೆಯಲ್ಲಿಯೇ ಹಿರಿಯ ನಾಗರಿಕರು ಮತ್ತು ಅಂಗವಿಕಲರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ವರುಣ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 11 ತಂಡಗಳನ್ನು ರಚನೆ ಮಾಡಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯಲ್ಲಿ ಚುನಾವಣಾ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಮತದಾನವನ್ನು ಮಾಡಿಸಿಕೊಳ್ಳುತ್ತಾರೆ.

Leave a Comment

Your email address will not be published. Required fields are marked *