Ad Widget .

ಕೈಗೆಟುಕದ ಹಳದಿ ಲೋಹ| ಬಂಗಾರ ಈಗ ಮತ್ತಷ್ಟು ಭಾರ

ಸಮಗ್ರ ನ್ಯೂಸ್: ಯುಗಾದಿ ಹಬ್ಬದ ಬಳಿಕ ಚಿನ್ನದ ದರ ಏರಿಕೆ ಕ್ರಮೇಣ ಮುಂದುವರೆದಿದ್ದು, ಶುಕ್ರವಾರವೂ ಕೂಡ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

Ad Widget . Ad Widget .

ಶುಕ್ರವಾರ ಚಿನ್ನದ ದರ ಏರಿಕೆಯಾಗಿದ್ದು, 22 ಕ್ಯಾರಟ್‌ ಚಿನ್ನದ ದರದಲ್ಲಿ ಬರೊಬ್ಬರಿ 100 ರೂ ಏರಿಕೆಯಾಗಿದ್ದು, 24 ಕ್ಯಾರೆಟ್‌ ಚಿನ್ನದ ಬೆಲೆ 109 ರೂ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನ 6,720ರೂ ಇದ್ದು, 24 ಕ್ಯಾರಟ್ ಚಿನ್ನದರ 7,331 ರೂಗೆ ಏರಿಕೆಯಾಗಿದೆ.

Ad Widget . Ad Widget .

ಮದುವೆಯಂತಹ ಕಾರ್ಯಕ್ರಮದಲ್ಲಿ ಚಿನ್ನ ಖರೀದಿ ಮಾಡುವುದು ಸಂಪ್ರದಾಯ ಕೂಡ ಹೌದು. ಆದರೆ ಈ ಪಾಠಿ ಚಿನ್ನ ಬೆಲೆ ಹೆಚ್ಚಳವಾಗುತ್ತಿರುವುದು ನುಂಗಲಾರದ ತುತ್ತಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 66,200 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 72,220 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

Leave a Comment

Your email address will not be published. Required fields are marked *