Ad Widget .

ಬೀದ‌ರ್: ಅಂಧ ವ್ಯಕ್ತಿ ನಾಮಪತ್ರ ಸಲ್ಲಿಕೆ-ಬ್ರೈಲ್‌ ಲಿಪಿಯಿಂದ ಪ್ರತಿಜ್ಞೆ ಸ್ವೀಕಾರ

ಸಮಗ್ರ ನ್ಯೂಸ್ : ಲೋಕಸಭಾ ಕ್ಷೇತ್ರದ ಚುನಾವಣೆಗೆ ಇಂದು ಅಧಿಸೂಚನೆ ಹೊರಬಿದ್ದಿದ್ದು, ಮೊದಲ ದಿನ ಅಂಧ ವ್ಯಕ್ತಿಯೊಬ್ಬರು ಉಮೇದುವಾರಿಕೆ ಸಲ್ಲಿಸಿದರು. ಬೀದರ ತಾಲ್ಲೂಕಿನ ಕಾಡವಾದ ಗ್ರಾಮದ ಅಂಧ ದಿಲೀಪ್‌ ನಾಗಪ್ಪ ಬೂಸಾ ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು.

Ad Widget . Ad Widget .

ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ನಾಮಪತ್ರ ಸಲ್ಲಿಸಿ, ಬ್ರೈಲ್ ಲಿಪಿ ಸಹಾಯದಿಂದ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಯಾವುದೇ ಆಡಂಬರವಿಲ್ಲದೆ ಸರಳವಾಗಿ ಬೆರಳೆಣಿಕೆಯ ಜನರೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು.

Ad Widget . Ad Widget .

ಹಾಗೂ ಯನಿವರ್ಸ್ ಸಿಟಿಜನ ಪಕ್ಷದಿಂದ ವಿನಯ ತಂದೆ ರಾಜೆಂದ್ರ ತಮ್ಮ ಉಮೇದುವಾರಿಕೆ ಸಲ್ಲಿಸಿದರು ಇಂದು ಒಟ್ಟು ಇಬ್ಬರು ನಾಮ ಪತ್ರ ಸಲ್ಲಿಸಿದರು.

Leave a Comment

Your email address will not be published. Required fields are marked *