Ad Widget .

ಮಂಗಳೂರಿನಲ್ಲಿ ಮೋದಿ ರೋಡ್‍ಶೋ/ ಸಂಚಾರ ವ್ಯವಸ್ಥೆ ಹೀಗಿದೆ ನೋಡಿ..

ಸಮಗ್ರ ನ್ಯೂಸ್: ನಾಳೆ (ಏ.14) ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಮಂಗಳೂರಿನಲ್ಲಿ ರೋಡ್‍ಶೋ ನಡೆಸಲಿದ್ದು, ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೋದಿ ರೋಡ್ ಶೋಗೆ ಬಿಜೆಪಿ ಸಾರಥ್ಯದಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದ್ದರೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ಬಿಗಿಗೊಳಿಸಿದೆ. ನಾಗರಿಕರಿಗೆ ಅನಾನುಕೂಲ ಉಂಟಾಗದಂತೆ ಹಾಗೂ ಪ್ರಧಾನಿ ರೋಡ್ ಶೋ ಸುಗಮವಾಗಿ ನಡೆಯುವಂತೆ ನಾಳೆ ಮಧ್ಯಾಹ್ನ 2 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೆ ನಗರದಲ್ಲಿ ಪರ್ಯಾಯ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ವಾಹನ ಸಂಚಾರ ನಿಷೇಧಿಸಿರುವ ಮಾರ್ಗಗಳು –
ನಾಳೆ ಮಧ್ಯಾಹ್ನದಿಂದ ಪ್ರಧಾನ ಮಂತ್ರಿಗಳ ಕಾರ್ಯಕ್ರಮ ಮುಗಿಯುವವರೆಗೆ ಈ ಕೆಳಗಿನ ಮಾರ್ಗಗಳಲ್ಲಿ ಎಲ್ಲಾ ತರಹದ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

Ad Widget . Ad Widget . Ad Widget .
  1. ಲೇಡಿಹಿಲ್ ಬಳಿಯ ಶ್ರೀ ನಾರಾಯಣಗುರು ವೃತ್ತ – ಲಾಲ್ಟಾಗ್ – ಬಲ್ಲಾಳ್ವಾಗ್ – ಕೊಡಿಯಾಲ್ ಗುತ್ತು – ಬಿ.ಜಿ ಸ್ಕೂಲ್ ಜಂಕ್ಷನ್ – – ಪಿ.ವಿ.ಎಸ್ – ನವಭಾರತ ವೃತ್ತ – ಹಂಪನಕಟ್ಟೆ ವರೆಗೆ
  2. ಕಾರ್ ಸ್ಟ್ರೀಟ್ – ಕುದ್ರೋಳಿ – ಕೂಳೂರು ಫೆರಿ ರಸ್ತೆ ಕಡೆಯಿಂದ ಅಡ್ಡ ರಸ್ತೆ ಮೂಲಕ ಎಂ.ಜಿ ರಸ್ತೆ
  3. ಕೆ.ಎಸ್.ಆರ್.ಟಿ.ಸಿ, ಶ್ರೀದೇವಿ ಕಾಲೇಜು ರಸ್ತೆ, ಕೊಡಿಯಾಲ್ ಗುತ್ತು ರಸ್ತೆ, ಜೈಲು ರಸ್ತೆ ಹಾಗೂ ಬಿಜೈ ಚರ್ಚ್ ರಸ್ತೆ ಮೂಲಕ ಎಂ.ಜಿ ರಸ್ತೆಗೆ ಬರುವ ಅಡ್ಡ ರಸ್ತೆ ಹಾಗೂ ಬಂಟ್ಸ್ ಹಾಸ್ಟೆಲ್ ಮೂಲಕ ಪಿ.ವಿ.ಎಸ್ ಕಡೆಗೆ ಹೋಗುವ ಮಾರ್ಗ
  4. ಕೊಟ್ಟಾರ ಚೌಕಿ, ಉರ್ವಾ ಸ್ಟೋರ್, ಕೋಟೆಕಣಿ ಕ್ರಾಸ್ನಿಂದ (ಲೇಡಿಹಿಲ್) ನಾರಾಯಣಗುರು ವೃತ್ತದ ಕಡೆಗೆ
  5. ಮಣ್ಣಗುಡ್ಡ ಜಂಕ್ಷನ್ ನಿಂದ ನಾರಾಯಣ ಗುರು ವೃತ್ತ (ಲೇಡಿಹಿಲ್) ದ ಕಡೆಗೆ
  6. ಉರ್ವಾ ಮಾರ್ಕೆಟ್ ಕಡೆಯಿಂದ ನಾರಾಯಣ ಗುರು ವೃತ್ತ (ಲೇಡಿಹಿಲ್) ದ ಕಡೆಗೆ
  7. ಕೆ.ಎಸ್.ಆರ್.ಟಿ.ಸಿ ಯಿಂದ ಲಾಲ್ಬಾಗ್ ಮುಖಾಂತರ ನಾರಾಯಣ ಗುರು ವೃತ್ತ (ಲೇಡಿಹಿಲ್) / ಪಿವಿಎಸ್ ಕಡೆಗೆ.
  8. ಬಂಟ್ಸ್ ಹಾಸ್ಟೆಲ್, ಕರಂಗಲ್ಪಾಡಿ, ಕೋರ್ಟ್ ಕ್ರಾಸ್ ರಸ್ತೆಯಿಂದ ಪಿವಿಎಸ್, ಎಂ.ಜಿ. ರೋಡ್
  9. ಕೆ.ಎಸ್.ರಾವ್ ರೋಡ್, ಡೊಂಗರಕೇರಿ ರಸ್ತೆ, ಗಡ್ಡೆಕೇರಿ ರೋಡ್, ವಿ.ಟಿ. ರೋಡ್, ಶಾರದಾ ವಿದ್ಯಾಲಯ ರಸ್ತೆ ಯಿಂದ ನವಭಾರತ್ ಸರ್ಕಲ್ ಕಡೆಗೆ.
  10. ಎಂ.ಜಿ ರಸ್ತೆಯಿಂದ ಜೈಲ್ ರೋಡ್ ಮುಖಾಂತರ ಬಿಜೈ ಚರ್ಚ್ ರೋಡ್ ಕಡೆಗೆ

ನೋ ಪಾಕಿರ್ಂಗ್‍ಗೆ ಸ್ಥಳಗಳು

  1. ಬಜಪೆ ವಿಮಾನ ನಿಲ್ದಾಣದಿಂದ ಕೆಂಜಾರು – ಮರವೂರು- ಕಾವೂರು- ಬೊಂದೇಲ್- ಮೇರಿಹಿಲ್ – ಕೆ.ಪಿ.ಟಿ – ಕೊಟ್ಟಾರ ಚೌಕಿ – ಉರ್ವ ಸ್ಟೋರ್ – ಶ್ರೀ ನಾರಾಯಣ ಗುರು ವೃತ್ತ (ಲೇಡಿಹಿಲ್) ವರೆಗೆ ರಸ್ತೆಯ ಎರಡು ಬದಿ
  2. ರೋಡ್ ಶೋ ನಡೆಯುವ ಲೇಡಿಹಿಲ್ ಬಳಿಯ ಶ್ರೀ ನಾರಾಯಣಗುರು ವೃತ್ತ – ಲಾಲ್ಬಾಗ್ – ಬಲ್ಲಾಳ್ವಾಗ್ ಕೊಡಿಯಾಲ್ ಗುತ್ತು – ಬಿ.ಜಿ ಸ್ಕೂಲ್ ಜಂಕ್ಷನ್ – ಪಿ.ವಿ.ಎಸ್ – ನವಭಾರತ ವೃತ್ತ – ಸಿಟಿ ಸೆಂಟರ್ – ಹಂಪನಕಟ್ಟೆ ವರೆಗೆ ಪ್ರಧಾನ ಮಂತ್ರಿಗಳ ಕಾರ್ಯಕ್ರಮ ಮುಗಿಯುವ ವರೆಗೆ ರಸ್ತೆಯ ಎರಡೂ ಬದಿ
  3. ಪ್ರಧಾನಮಂತ್ರಿಗಳು ವಾಪಸ್ಸು ಬಜಪೆ ವಿಮಾನ ನಿಲ್ದಾಣ ಕಡೆಗೆ ಸಂಚರಿಸುವ ರಸ್ತೆಯಾದ ಹಂಪನಕಟ್ಟ – ಎಲ್.ಹೆಚ್.ಹೆಚ್ ಬಾವುಟಗುಡ್ಡ – ಡಾ.ಅಂಬೇಡ್ಕರ್ ವೃತ್ತ ಬಂಟ್ಸ್ ಹಾಸ್ಟೆಲ್ – ಭಾರತ್ ಬೀಡಿ – ಕದ್ರಿ ಕಂಬಳ – ಭಟ್ಟಗುಡ್ಡೆ ರಸ್ತೆಯ ಎರಡು ಬದಿ
  4. ಕಾವೂರು – ಪಂಜಿಮೊಗೆರು- ಕೂಳೂರು – 4 ನೇ ಮೈಲು – ಕೊಟ್ಟಾರಚೌಕಿ ರವರೆಗೆ ರಸ್ತೆಯ ಎರಡು ಬದಿ
  5. ಹಂಪನಕಟ್ಟ – ಎಲ್.ಹೆಚ್.ಹೆಚ್ – ಬಲ್ಮಠ ರೋಡ್ – ರೂಪಾ ಹೋಟೆಲ್ ರಸ್ತೆ – ಡಾ.ಅಂಬೇಡ್ಕರ್ ವೃತ್ತ ಕಲೆಕ್ಚರ್ಸ್ ಗೇಟ್ ವೃತ್ತ – ಹಾರ್ಟಿಕಲ್ಟರ್ ಜಂಕ್ಷನ್ – ಸೈಂಟ್ ಆಗ್ನೆಸ್ – ಶಿವಭಾಗ್ ನಂತೂರು ವೃತ್ತ – ಪದುವಾ – ಕೆ.ಪಿ.ಟಿ ವರೆಗೆ ಎರಡು ಬದಿ
  6. ಬಿ.ಜಿ. ಜಂಕ್ಷನ್ – ಜೈಲ್ ರೋಡ್ – ಬಿಜೈ ಚರ್ಚ್ ರೋಡ್ ರವರೆಗೆ ಎರಡು ಬದಿ

ವಾಹನ ಸಂಚಾರದ ಪರ್ಯಾಯ ವ್ಯವಸ್ಥೆಯ ಹೀಗಿದೆ..

  1. ಉಡುಪಿ ಕಡೆಯಿಂದ ಮಂಗಳೂರು ನಗರಕ್ಕೆ ಬರುವ ಎಲ್ಲಾ ಬಸ್ಸು ಹಾಗೂ ಎಲ್ಲಾ ರೀತಿಯ ವಾಹನಗಳು ಕೊಟ್ಟಾರ ಚೌಕಿ ಜಂಕ್ಷನ್ – ಕೆಪಿಟಿ ಜಂಕ್ಷನ್ ನಂತೂರು ಜಂಕ್ಷನ್ – ಶಿವಭಾಗ್ ಜಂಕ್ಷನ್ – ಸೆಂಟ್ ಆಗ್ನೆಸ್ ಹಾರ್ಟಿಕಲ್ಟರ್ ಜಂಕ್ಷನ್ – ಲೋವರ್ ಬೆಂದೂರು ಕರಾವಳಿ ಜಂಕ್ಷನ್ ಕಂಕನಾಡಿ ಜಂಕ್ಷನ್ ಅವೇರಿ ಜಂಕ್ಷನ್ ಮಿಲಾಗ್ರಿಸ್ ಜಂಕ್ಷನ್ – ಹಂಪನಕಟ್ಟ ಜಂಕ್ಷನ್ – ಕ್ಲಾಕ್ ಟವರ್ ಮೂಲಕ ಚಲಿಸುವುದು ಹಾಗೂ ಮಂಗಳೂರು ನಗರ ಸ್ಟೇಟ್ಯಾಂಕ್ ಕಡೆಯಿಂದ ಉಡುಪಿ ಕಡೆಗೆ ಹೋಗುವ ವಾಹನಗಳು ಲೇಡಿ ಗೋಷನ್ – ಕ್ಲಾಕ್ ಟವರ್ – ರೈಲ್ವೇ ಸ್ಟೇಷನ್ ಜಂಕ್ಷನ್ – ನಂದಿಗುಡ್ಡ ರೋಡ್ – ಕೋಟಿಚೆನ್ನಯ್ಯ ಸರ್ಕಲ್ – ಕಂಕನಾಡಿ ಜಂಕ್ಷನ್ ಮೂಲಕ ಮುಂದೆ ಸಂಚರಿಸುವುದು.
  2. ಪಂಪುವೆಲ್ ಕಡೆಯಿಂದ ಮಂಗಳೂರು ನಗರಕ್ಕೆ ಬರುವ ಬಸ್ಸು ಹಾಗೂ ಎಲ್ಲಾ ರೀತಿಯ ವಾಹನಗಳು ಕರಾವಳಿ ಜಂಕ್ಷನ್ ಕಂಕನಾಡಿ ಜಂಕ್ಷನ್ ಅವೇರಿ ಜಂಕ್ಷನ್ ಮಿಲಾಗ್ರಿಸ್ ಜಂಕ್ಷನ್ ಹಂಪನಕಟ್ಟ ಜಂಕ್ಷನ್ – ಕ್ಲಾಕ್ ಟವರ್ ಮೂಲಕ ಚಲಿಸುವುದು ಹಾಗೂ ಮಂಗಳೂರು ನಗರ ಸ್ಟೇಟ್ಯಾಂಕ್ ಕಡೆಯಿಂದ ಪಂಪ್ಪಲ್ ಕಡೆಗೆ ಹೋಗುವ ವಾಹನಗಳು ಲೇಡಿ ಗೋಷನ್ – ಕ್ಲಾಕ್ ಟವರ್ – ರೈಲ್ವೇ ಸ್ಟೇಷನ್ ಜಂಕ್ಷನ್ ನಂದಿಗುಡ್ಡ ರೋಡ್ – ಕೋಟಿಚೆನ್ನಯ್ಯ ಸರ್ಕಲ್ – ಕಂಕನಾಡಿ ಜಂಕ್ಷನ್ ಮೂಲಕ ಮುಂದೆ ಸಂಚರಿಸುವುದು.
  3. ಕಾಶ್ರ್ಮೀಟ್ – ಕುದ್ರೋಳಿ ಕಡೆಯಿಂದ ಬರುವ ಎಲ್ಲಾ ವಾಹನಗಳನ್ನು ಮಣ್ಣಗುಡ್ಡೆ, ಉರ್ವಾ ಮಾರ್ಕೆಟ್ ಮುಖಾಂತರ ಅಶೋಕನಗರ ಕೋಡಿಕಲ್ ಕ್ರಾಸ್ ಮೂಲಕ ಸಂಚರಿಸುವುದು.
  4. ಬಿಜೈ ಚರ್ಚ್ ಕಡೆಯಿಂದ ಬರುವ ವಾಹನಗಳು ಕೆ.ಎಸ್.ಆರ್.ಟಿ.ಸಿ. ಜಂಕ್ಷನ್ ಮುಖಾಂತರ ಕೊಟ್ಟಾರ ಕ್ರಾಸ್ / ಕುಂಟಿಕಾನದ ಕಡೆಗೆ ಸಂಚರಿಸುವುದು.
  5. ಕುಂಟಿಕಾನ ಕೊಟ್ಟಾರ ಕ್ರಾಸ್ ಕಡೆಯಿಂದ ಬರುವ ವಾಹನಗಳನ್ನು ಕೆ.ಎಸ್.ಆರ್.ಟಿ.ಸಿ. ಜಂಕ್ಷನ್ ನ ಮುಖಾಂತರ ಬಿಜೈ ಚರ್ಚ್ ಕಡೆಗೆ ಸಂಚರಿಸುವುದು.

ಪಾಕಿರ್ಂಗ್ ವ್ಯವಸ್ಥೆ ಹೀಗಿದೆ ನೋಡಿ..

ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಸಂಜೆ 5 ಗಂಟೆಗೆ ಮುಂಚಿತವಾಗಿ ಈ ಕೆಳಕಂಡಂತೆ ಗುರುತಿಸಲಾದ ಪಾಕಿರ್ಂಗ್ ಸ್ಥಳಗಳಲ್ಲಿ ಅವರ ವಾಹನಗಳನ್ನು ನಿಲುಗಡೆಗೊಳಿಸಿ ಪ್ರಧಾನ ಮಂತ್ರಿಯವರ ರೋಡ್ ಶೋವನ್ನು ವೀಕ್ಷಣೆ ಮಾಡಲು ನಿಗದಿಪಡಿಸಿದ ಸ್ಥಳಗಳಲ್ಲಿ ಹಾಜರಿರಬೇಕಿದೆ.ಕರಾವಳಿ ಮೈದಾನ, ಲೇಡಿಹಿಲ್ ಶಾಲಾ ಮೈದಾನ, ಲೇಡಿಹಿಲ್ ಚರ್ಚ್ ಮೈದಾನ, ಉರ್ವ ಮಾರ್ಕೆಟ್ ಮೈದಾನ, ಉರ್ವ ಸ್ಟೋರ್ ಮೈದಾನ, ಉರ್ವ ಕೆನರಾ ಶಾಲಾ ಮೈದಾನ, ಕೆನರಾ ಕಾಲೇಜು ಮೈದಾನ, ಡೊಂಗರಕೇರಿ ಕೆನರಾ ಶಾಲಾ ಮೈದಾನ, ಗಣಪತಿ ಶಾಲಾ ಮೈದಾನ, ರಾಮಕೃಷ್ಣ ಶಾಲಾ ಮೈದಾನ, ಬಂಟ್ಸ್ ಹಾಸ್ಟೇಲ್, ಸಿ.ವಿ ನಾಯಕ್ ಹಾಲ್ ಮೈದಾನ, ನೆಹರೂ ಮೈದಾನ, ಪುರಭವನ ಪಾಕಿರ್ಂಗ್ ಸ್ಥಳ, ಕದ್ರಿ ಮೈದಾನ, ಕೆಪಿಟಿ ಕಾಲೇಜು ಮೈದಾನ, ಕೆಟಿಪಿ ಬಳಿಯ ಆರ್.ಟಿ.ಓ ಮೈದಾನ, ಪದುವಾ ಕಾಲೇಜು ಮೈದಾನ, ಗೋಲ್ಡ್ ಫಿಂಚ್ ಸಿಟಿ ಮೈದಾನ, ಕೂಳೂರು, ಸುಲ್ತಾನ್ ಬತ್ತೇರಿ ಗೌಂಡ್ಸ್, ಗೋಕರ್ಣಥೇಶ್ವರ ಕಾಲೇಜು ಗೌಂಡ್, ಎಮ್ಮೆಕರೆ ಮೈದಾನ, ಮಂಗಳೂರು ವಿಶ್ವವಿದ್ಯಾನಿಲಯ ಮೈದಾನ, ಹಂಪನಕಟ್ಟೆ, ಮಿಲಾಗ್ರಿಸ್ ಚರ್ಚ್ ಪಾಕಿರ್ಂಗ್ ಗೌಂಡ್, ಮಿಲಾಗ್ರಿಸ್ ಕಾಲೇಜು ಮೈದಾನ, ಬಲ್ಮಠ ಶಾಂತಿ ನಿಲಯ ಮೈದಾನ, ಸೆಂಟ್ ಸೆಬಾಸ್ಟಿನ್ ಹಾಲ್ ಪಾಕಿಂಗ್ (ಸೆಂಟ್ ಆಗ್ನೆಸ್ ಶಾಲೆ)ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಆಗಮಿಸುವ ಸಂಬಂಧ ಸಂಜೆ 5 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗವನ್ನು ಉಪಯೋಗಿಸುವಂತೆ ಪೊಲೀಸ್ ಇಲಾಖೆ ಕೋರಿದೆ.

Leave a Comment

Your email address will not be published. Required fields are marked *