Ad Widget .

ಮುನಿಸು ಮರೆತ ಮಾಧುಸ್ವಾಮಿ/ ಸೋಮಣ್ಣ ಪರ ಪ್ರಚಾರ

ಸಮಗ್ರ ನ್ಯೂಸ್: ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಮುನಿಸಿಕೊಂಡಿದ್ದ ಮಾಜಿ ಸಚಿವ ಮಾಧುಸ್ವಾಮಿ ಅವರು ಇದೀಗ ಇದೇ ಮೊದಲ ಬಾರಿಗೆ ಪಕ್ಷದ ಅಭ್ಯರ್ಥಿ ಸೋಮಣ್ಣ ಪರ ಪ್ರಚಾರದಲ್ಲಿ ಧುಮುಕಿದ್ದಾರೆ ಅದರಂತೆ ಶುಕ್ರವಾರ ಬೆಳಗ್ಗೆಯಿಂದಲೇ ಮೈತ್ರಿ ಪಕ್ಷದ ಅತೃಪ್ತ ಮುಖಂಡರನ್ನು ಭೇಟಿ ಮಾಡಿ ಬಿಜೆಪಿ ಪರ ಕೆಲಸ ಮಾಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

Ad Widget . Ad Widget .

ಮುಖ್ಯವಾಗಿ ಜಿಪಂ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಹಾಗೂ ರಾಜ್ಯ ಉಪ್ಪಾರ ಸಮುದಾಯದ ಉಪಾಧ್ಯಕ್ಷರೂ ಆಗಿರುವ ಕಲ್ಲೇಶ್ ಮನೆಗೆ ಭೇಟಿ ಕೊಟ್ಟ ಮಾಧುಸ್ವಾಮಿ ಅವರ ಜತೆಗೆ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಮೈತ್ರಿ ಪಕ್ಷದವರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ದೂರಿ ಜೆಡಿಎಸ್ ತೊರೆಯಲು ಕಲ್ಲೇಶ್ ಮುಂದಾಗಿದ್ದರು. ಹೀಗಾಗಿ ಚಿಕ್ಕನಾಯಕನಹಳ್ಳಿ ತಾಲೂಕು ಸೋಮನಹಳ್ಳಿಯಲ್ಲಿರುವ ಕಲ್ಲೇಶ್ ತೋಟದ ಮನೆಗೆ ಮಾಧುಸ್ವಾಮಿ ಭೇಟಿ ನೀಡಿ ಮಾತುಕತೆ ನಡೆಸಿದ್ದಲ್ಲದೆ ಪಕ್ಷ ತೊರೆಯುವ ನಿರ್ಧಾರದಿಂದ ಕಲ್ಲೇಶ್ ಹಿಂದೆ ಸರಿಯುವಂತೆ ಮನವೊಲಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *