ಬೆಂಗಳೂರಿನಲ್ಲಿ ಐಪಿಎಲ್ ಗೌಜಿ/ ಅವಧಿ ವಿಸ್ತರಣೆ ಮಾಡಿದ ನಮ್ಮ ಮೆಟ್ರೋ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ಜೊತೆಗೆ ಐಪಿಎಲ್ ಕೂಡ ನಡೆಯುತ್ತಿದ್ದು, ಎಪ್ರಿಲ್ 15, ಮೇ 4, 12 ಹಾಗೂ 18 ರಂದು ಐಪಿಎಲ್ ಪಂದ್ಯಾವಳಿಗಳನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿದೆ. ಈ ಹಿನ್ನೆಲೆ ಐಪಿಎಲ್ ಪ್ರಿಯರಿಗಾಗಿ ಮೆಟ್ರೋ ಅವಧಿ ವಿಸ್ತರಣೆ ಮಾಡಿ ಬಿಎಂಆರ್ ಸಿಎಲ್ ಆದೇಶ ಹೊರಡಿಸಿದ್ದು, ಪಂದ್ಯದ ವೇಳೆ ಮೆಟ್ರೋ ಸಂಚಾರದ ಅವಧಿಯನ್ನ ಮಧ್ಯರಾತ್ರಿ ಮಧ್ಯರಾತ್ರಿ 11.30 ವರೆಗೂ ವಿಸ್ತರಿಸಿದೆ.

Ad Widget ... ..

ಇನ್ನು ಮೆಟ್ರೋ ನಿಲ್ದಾಣಗಳಲ್ಲಿ ರಿಟರ್ನ್ ಪೇಪರ್ ಟಿಕೆಟ್ ವಿತರಣೆ ಕೂಡ ಲಭ್ಯವಿದ್ದು, ಪಂದ್ಯದ ವೇಳೆ ಮಧ್ಯಾಹ್ನ 2 ಗಂಟೆಯಿಂದ ಎಲ್ಲಾ ನಿಲ್ದಾಣಗಳಲ್ಲಿ 50 ರೂಪಾಯಿ ಪೇಪರ್ ಟಿಕೆಟ್ ಸಿಗಲಿದೆ. ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪೇಪರ್ ಟಿಕೆಟ್‍ಗೆ ವ್ಯವಸ್ಥೆ ಮಾಡಲಾಗಿದೆ. ಪೇಪರ್ ಟಿಕೆಟ್ ಪಡೆದು ಎಲ್ಲಾ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲು ಅವಕಾಶ ಇದೆ. ಆದರೆ, ಈ ಟಿಕೆಟ್ ರಾತ್ರಿ 8 ರಿಂದ ದಿನದ ಸೇವೆಗಳು ಕೊನೆಗೊಳ್ಳುವರೆಗೆ ಮಾತ್ರ ಮಾನ್ಯವಾಗಲಿದೆ.

Ad Widget

Leave a Comment

Your email address will not be published. Required fields are marked *