Ad Widget .

ಚಂಡೀಗಢ:ಇಂದಿರಾ ಗಾಂಧಿ ಹಂತಕನ ಪುತ್ರ ಲೋಕಸಭಾ ಚುನಾವಣೆಗೆ ಸ್ಪರ್ಧೆ

ಸಮಗ್ರ ನ್ಯೂಸ್‌ : ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹಂತಕನ ಪುತ್ರನೊಬ್ಬ ಪಂಜಾಬ್‌ನ ಸಂಸತ್ ಚುನಾವಣೆಯಲ್ಲಿ ಫರೀದ್‌ಕೋಟ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

12ನೇ ತರಗತಿಯಲ್ಲಿ ಡ್ರಾಪ್ಔಟ್ ಆಗಿದ್ದ ಸರಬ್ಜಿತ್ ಸಿಂಗ್ ಖಾಲ್ಸಾ (45) ಚುನಾವಣೆಯಲ್ಲಿ ಸ್ಪರ್ಧೆಗಿಳಿದಿದ್ದಾರೆ. ಇವರು ದಿವಂಗತ ಪ್ರಧಾನಿಯ ಇಬ್ಬರು ಹಂತಕರಲ್ಲಿ ಒಬ್ಬನಾದ ಬಿಯಾಂತ್ ಸಿಂಗ್ ಮಗ.

Ad Widget . Ad Widget . Ad Widget .

2014 ಮತ್ತು 2009 ರಲ್ಲಿ ಸರಬ್ಜಿತ್ ಸಿಂಗ್ ಖಾಲ್ಸಾ ಅವರು ಅನುಕ್ರಮವಾಗಿ ಫತೇಘರ್ ಸಾಹಿಬ್ (ಮೀಸಲು) ಮತ್ತು ಬಟಿಂಡಾ ಕ್ಷೇತ್ರಗಳಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. 2019 ರಲ್ಲಿ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿದ್ದರು.

2014ರಲ್ಲಿ ಸರಬ್ಜಿತ್, ಚುನಾವಣಾ ಅಫಿಡವಿಟ್‌ನಲ್ಲಿ 3.5 ಕೋಟಿ ರೂ. ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಅವರ ತಾಯಿ ಬಿಮಲ್ ಕೌರ್ (ರೋಪರ್ ಕ್ಷೇತ್ರ) ಮತ್ತು ಅವರ ಅಜ್ಜ ಸುಚಾ ಸಿಂಗ್ (ಬಟಿಂಡಾ ಕ್ಷೇತ್ರ) 1989 ರಲ್ಲಿ ಸಂಸದರಾಗಿದ್ದರು.

1984ರ ಅಕ್ಟೋಬರ್ 31ರಂದು ಇಂದಿರಾ ಗಾಂಧಿ ಅವರ ನಿವಾಸದಲ್ಲಿ ಅಂಗರಕ್ಷಕರಾಗಿದ್ದ ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್, ಪ್ರಧಾನಿಯನ್ನು ಗುಂಡಿಕ್ಕಿ ಕೊಂದಿದ್ದರು.

Leave a Comment

Your email address will not be published. Required fields are marked *