Ad Widget .

ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ’ದ ಚಿತ್ರೀಕರಣ ಪ್ರಾರಂಭ/ ಚಿತ್ರ ನಿರ್ಮಾಣಕ್ಕೆ ಸಾಥ್ ನೀಡಿದ ಯಶ್

ಸಮಗ್ರ ನ್ಯೂಸ್: ಬಾಲಿವುಡ್‍ನ ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ’ದ ಚಿತ್ರೀಕರಣ ಪ್ರಾರಂಭವಾಗಿದ್ದು, ಈ ಚಿತ್ರಕ್ಕಾಗಿ ಯಶ್ ಒಡೆತನದ ಮಾನ್‍ಸ್ಟರ್‍ಮೈಂಡ್ ಕ್ರಿಯೇಷನ್ ಹಾಗೂ ನಮಿತ್ ಮಲ್ಲೋತ್ರಾ ಸಾರಥ್ಯದ ಪ್ರೈಮ್ ಫೆÇೀಕಸ್ ಸ್ಟುಡಿಯೊ ಕೈ ಜೋಡಿಸಿದ್ದಾರೆ.

Ad Widget . Ad Widget .

ದಂಗಲ್’ ಸಿನಿಮಾ ಖ್ಯಾತಿಯ ನಿರ್ದೇಶಕ ನಿತೀಶ್ ತಿವಾರಿ ‘ರಾಮಾಯಣ’ ಸಿನಿಮಾವನ್ನು ಬಹಳ ಅದ್ದೂರಿಯಾಗಿ ದೃಶ್ಯ ರೂಪಕ್ಕೆ ಇಳಿಸುವುದಕ್ಕೆ ಸಜ್ಜಾಗಿದ್ದಾರೆ. ಚಿತ್ರದಲ್ಲಿ ಯಶ್ ಕೂಡಾ ನಟಿಸಲಿದ್ದಾರೆ ಎನ್ನುವ ಗಾಳಿಸುದ್ದಿ ಹಬ್ಬಿತ್ತು. ಆದರೆ ಯಶ್ ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಎನ್ನುವುದನ್ನು ಚಿತ್ರತಂಡವೇ ಘೋಷಿಸಿದೆ.

Ad Widget . Ad Widget .

ಯಶ್, ಗೀತು ಮೋಹನ್‍ದಾಸ್ ನಿರ್ದೇಶನದ ತಮ್ಮ ಮುಂದಿನ ಚಿತ್ರ ‘ಟಾಕ್ಸಿಕ್’ ಸಿನಿಮಾವನ್ನೂ ಮಾನ್‍ಸ್ಟರ್‍ಮೈಂಡ್ ಕ್ರಿಯೇಷನ್‍ನಡಿ ನಿರ್ಮಾಣ ಮಾಡುತ್ತಿದ್ದಾರೆ. ಕೆವಿಎನ್ ಪೆÇ್ರಡಕ್ಷನ್ಸ್ ಜೊತೆಗೆ ಮಾನ್‍ಸ್ಟರ್‍ಮೈಂಡ್ ಕೂಡ ‘ಟಾಕ್ಸಿಕ್’ ಸಿನಿಮಾದ ನಿರ್ಮಾಣದಲ್ಲಿ ಪಾಲುದಾರಿಕೆ ಹೊಂದಿದೆ. ಇದೇ ಬ್ಯಾನರ್‍ನಡಿ ‘ರಾಮಾಯಣ’ ಸಿನಿಮಾಗೂ ಯಶ್ ಬಂಡವಾಳ ಹೂಡುತ್ತಿದ್ದಾರೆ.

‘ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವಂತಹ ಸಿನಿಮಾವೊಂದನ್ನು ನಿರ್ಮಾಣ ಮಾಡಬೇಕು ಎನ್ನುವ ಆಕಾಂಕ್ಷೆಯನ್ನು ಬಹಳ ವರ್ಷಗಳಿಂದ ಹೊಂದಿದ್ದೆ. ಇತ್ತೀಚೆಗೆ ಲಾಸ್‍ಏಂಜಲಿಸ್‍ನಲ್ಲಿರುವ ಒಂದು ಖ್ಯಾತ ವಿಎಫ್‍ಎಕ್ಸ್ ಸ್ಟುಡಿಯೊ ಜೊತೆ ಮಾತುಕತೆಗೆ ತೆರಳಿದ್ದಾಗ, ಆ ಸ್ಟುಡಿಯೊ ಹಿಂದಿನ ಪ್ರೇರಕ ಶಕ್ತಿಯಾಗಿ ಒಬ್ಬ ಭಾರತೀಯರಿದ್ದರು. ನಮಿತ್ ಜೊತೆ ಹಲವು ಪ್ರಾಜೆಕ್ಟ್ ಬಗ್ಗೆ ಚರ್ಚೆ ನಡೆಸುವ ಸಂದರ್ಭದಲ್ಲಿ ರಾಮಾಯಣ ವಿಷಯ ಮುನ್ನೆಲೆಗೆ ಬಂತು. ರಾಮಾಯಣ ನಮ್ಮ ಜೀವನದ ಭಾಗವಾಗಿದೆ. ಅದರ ಬಗ್ಗೆ ಎಲ್ಲವನ್ನೂ ತಿಳಿದುಕೊಂಡಿದ್ದೇವೆ ಎಂದುಕೊಂಡರೂ, ಪ್ರತಿ ಬಾರಿ ರಾಮಾಯಣದೊಳಗೆ ಹೊಕ್ಕಾಗ ಹೊಸ ಜ್ಞಾನ, ಭಿನ್ನವಾದ ದೃಷ್ಟಿಕೋನ ಲಭಿಸುತ್ತದೆ. ಈ ಕಾಲಾತೀತ ಮಹಾಕಾವ್ಯವನ್ನು ಅದ್ದೂರಿಯಾಗಿ ಬೆಳ್ಳಿತೆರೆಗೆ ತರುವುದು ನಮ್ಮ ಉದ್ದೇಶ. ನಮಿತ್ ಜೊತೆ ಈ ಪ್ರಾಜೆಕ್ಟ್‍ನಲ್ಲಿ ಕೈಜೋಡಿಸಿ, ವಿಶ್ವದಾದ್ಯಂತ ಇರುವ ಪ್ರೇಕ್ಷಕರಿಗೆ ಅತ್ಯುತ್ತಮ ಅನುಭವ ನೀಡುವ ಭಾರತೀಯ ಸಿನಿಮಾವೊಂದನ್ನು ನೀಡಲಿದ್ದೇವೆ’ ಎಂದಿದ್ದಾರೆ ಯಶ್.

Leave a Comment

Your email address will not be published. Required fields are marked *