Ad Widget .

ಚೆನ್ನೈ: ಚುನಾವಣೆಯ ಬಗ್ಗೆ ಭವಿಷ್ಯ ನುಡಿದ ಗಿಳಿ ಮಾಲೀಕನ ಬಂಧನ

ಸಮಗ್ರ ನ್ಯೂಸ್‌ : ಲೋಕಸಭಾ ಚುನಾವಣೆಯ ಪ್ರಚಾರ ಜೋರಾಗಿದ್ದು, ತಮಿಳುನಾಡಿನಲ್ಲಿ PMK ಪಕ್ಷದ ಚುನಾವಣಾ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಗಿಳಿಯೊಂದು ಭವಿಷ್ಯ ನುಡಿದಿದ್ದು, ಗಿಳಿಯ ಮಾಲೀಕನನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

Ad Widget . Ad Widget .

ಗಿಳಿಮರಿ ಕೈಯಲ್ಲಿ ಭವಿಷ್ಯ ಹೇಳಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕಡಲೂರು ಲೋಕಸಭಾ ಕ್ಷೇತ್ರದಲ್ಲಿ ಪಿಎಂಕೆ ಪಕ್ಷದಿಂದ ಥಂಕರ್ ಬಚ್ಚನ್ ಅವರು ಸ್ಪರ್ಧಿಸಿದ್ದಾರೆ. ಇವರು ಬೀದಿ ಬದಿಯಲ್ಲಿ ಗಿಳಿ ಶಾಸ್ತ್ರ ಕೇಳಿದ್ದರು. ಸೆಲ್ವರಾಜ್ ಎಂಬುವವರು ಗಿಳಿ ಕೈಯಲ್ಲಿ ಭವಿಷ್ಯ ಹೇಳಿಸಿ ಥಂಕರ್ ಬಚ್ಚನ್‌ ಅವರು ಈ ಬಾರಿ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದಿದೆ.

Ad Widget . Ad Widget .

ಪಿಎಂಕೆ ಪಕ್ಷದ ಥಂಕರ್ ಬಚ್ಚನ್ ಗಿಳಿ ಶಾಸ್ತ್ರ ಗೆಲ್ಲುತ್ತೇನೆ ಅನ್ನೋ ಭವಿಷ್ಯ ಕೇಳಿ ತುಂಬಾ ಖುಷಿಯಾದರು. ಗಿಳಿ ಮರಿಗೆ ಒಂದು ಬಾಳೆಹಣ್ಣನ್ನು ಕೊಟ್ಟು ಹೋಗಿದ್ದಾರೆ. ಸೆಲ್ವರಾಜ್ ಅವರು ಗಿಳಿಮರಿಯನ್ನು ಪಂಜರದಲ್ಲಿಟ್ಟು ಗಿಳಿ ಶಾಸ್ತ್ರ ಹೇಳುತ್ತಾ ಜೀವನ ನಡೆಸುತ್ತಿದ್ದಾರೆ. ಇದೀಗ ಚುನಾವಣೆಯ ಸಮಯದಲ್ಲಿ ಭವಿಷ್ಯ ಹೇಳಿ ಆಪತ್ತಿಗೆ ಸಿಲುಕಿದ್ದಾರೆ. ಸೆಲ್ವರಾಜ್ ಜೊತೆಗಿದ್ದ ಆತನ ಸಹೋದರನನ್ನು ಬಂಧಿಸಲಾಗಿದೆ.

1972ರ ವನ್ಯಜೀವಿ ಸಂರಕ್ಷಣಾ ಕಾಯಿದೆ ಪ್ರಕಾರ ಪಕ್ಷಿಯನ್ನು ಪಂಜರದಲ್ಲಿಟ್ಟು ಬಳಸಿಕೊಳ್ಳುವಂತಿಲ್ಲ. ಈ ಕಾಯ್ದೆ ಉಲ್ಲಂಘಿಸಿದ ಆರೋಪದಲ್ಲಿ ಹಾಗೂ ಅಕ್ರಮವಾಗಿ ವನ್ಯಜೀವಿಯನ್ನು ಬಳಕೆ ಮಾಡಿದ ಹಿನ್ನೆಲೆಯಲ್ಲಿ ತಮಿಳುನಾಡು ಅರಣ್ಯ ವಿಭಾಗದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಗಿಳಿ ಶಾಸ್ತ್ರ ಹೇಳಿದ ಸೆಲ್ವರಾಜ್ ಅವರನ್ನು ಬಂಧಿಸಿದ ಬಳಿಕ ಎಚ್ಚರಿಕೆ ಕೊಟ್ಟು ಬಿಡುಗಡೆ ಮಾಡಿದ್ದಾರೆ.

Leave a Comment

Your email address will not be published. Required fields are marked *