Ad Widget .

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕೊಡಗಿನ ತಾಯಿ ಮಗಳು ಪಾಸ್!

ಸಮಗ್ರ ನ್ಯೂಸ್: ಕುಶಾಲನಗರ ತಾಲೂಕಿನ ಕೂಡ್ಲೂರು ಚೆಟ್ಟಳ್ಳಿ ಗ್ರಾಮದ ರಿನಿಶಾ ಹಾಗು ಅವಳ ತಾಯಿ ಬೇಬಿರಾಣಿ 2023-24ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.!

Ad Widget . Ad Widget .

ಗೋಣಿಕೊಪ್ಪಲಿನ ವಿದ್ಯಾನಿಕೇತನ ಕಾಲೇಜಿನಲ್ಲಿ ಓದುತಿರುವ ಎಲೆಕ್ಟ್ರಿಕಲ್ ಕ್ಲಾಸ್ 1 ಗುತ್ತಿಗೆದಾರ ಸುರೇಂದ್ರ.ಟಿ.ಕೆ ರವರ ಪುತ್ರಿ ರಿನಿಶಾ ಟಿ.ಎಸ್ 600ಕ್ಕೆ 570 ಪಡೆದು ಅತ್ಯುನ್ನತ ಅಂಕ ಪಡೆದರೆ ಅವಳ ತಾಯಿ ಬೇಬಿರಾಣಿ.ಎಂ. ಯು. ನೆಲ್ಲಿಹುದಿಕೇರಿ ಜೂನಿಯರ್ ಕಾಲೇಜಿನಲ್ಲಿ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆದು 600ಕ್ಕೆ 388 ಪಡೆಯುವ ಮೂಲಕ ಒಂದೇ ವರ್ಷದಲ್ಲಿ ತಾಯಿಮಗಳು ಪಿಯುಸಿ ಉತ್ತೀರ್ಣ ರಾಗಿದ್ದಾರೆ. ಕನ್ನಡದಲ್ಲಿ ಮಗಳು 96 ಪಡೆದರೆ ತಾಯಿ 93 ಅಂಕಪಡೆದಿದ್ದಾರೆ.

Ad Widget . Ad Widget .

ಕಳೆದ 25 ವರ್ಷಗಳ‌‌ ಹಿಂದೆ ಹತ್ತನೇ ತರಗತಿಯನ್ನು ಓದಿದ ನಂತರ ಈಗ ಮಗಳ ಒತ್ತಾಯಕ್ಕಾಗಿ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿರುವುದು ಹೆಮ್ಮೆ ಎನಿಸಿದೆ ಎಂದು ಬೇಬಿರಾಣಿ ಹೇಳುತ್ತಾಳೆ.

ನನ್ನ ತಾಯಿಯು ಪಿಯುಸಿ ಉತ್ತೀರ್ಣರಾಗಿವುದು‌ ನಾನು ಉತ್ತೀರ್ಣರಾಗಿರುವುದಕ್ಕಿಂತಲೂ ಹೆಮ್ಮೆಯಾಗಿದೆ ಎನ್ನುತ್ತಾಳೆ ರಿನಿಶಾ.

Leave a Comment

Your email address will not be published. Required fields are marked *