Ad Widget .

ತಿರುಮಲದಲ್ಲಿ ಏಪ್ರಿಲ್ 21ರಿಂದ ಹಲವು ಸೇವೆಗಳು ರದ್ದು

ಸಮಗ್ರ ನ್ಯೂಸ್‌ : ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ನಡೆಯುವ ವಸಂತೋತ್ಸವ ಈ ಬಾರಿ ಏ. 21ರಿಂದ 23ರವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ದೇವಾಲಯದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದರಿಂದ ಯಾವುದೇ ನಿಯಮಿತ ಸೇವೆಗಳನ್ನು ನಡೆಸಲಾಗುವುದಿಲ್ಲ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಬರುವ ಚೈತ್ರ ಮಾಸದ ತ್ರಯೋದಶಿ, ಚತುರ್ದಶಿ ಮತ್ತು ಪೌರ್ಣಮಿಯ ಶುಭ ದಿನಗಳಲ್ಲಿ ವಾರ್ಷಿಕ ಸಲಕಟ್ಲ ವಸಂತೋತ್ಸವವನ್ನು ನಡೆಸಲಾಗುತ್ತದೆ. ಈ ಬಾರಿ ಮೂರು ದಿನಗಳ ಸಲಕಟ್ಲ ವಸಂತೋತ್ಸವವು ಏಪ್ರಿಲ್ 21ರಿಂದ 23ರವರೆಗೆ ವೈಭವದಿಂದ ನಡೆಯಲಿದೆ. ಚೈತ್ರ ಶುದ್ಧ ಹುಣ್ಣಿಮೆಯಂದು ಮುಕ್ತಾಯವಾಗುವ ಈ ಉತ್ಸವವನ್ನು ಮೂರು ದಿನಗಳ ಕಾಲ ಅದ್ಧೂರಿಯಿಂದ ನಡೆಸಲಾಗುತ್ತದೆ.

Ad Widget . Ad Widget . Ad Widget .

ದೇವಾಲಯದಲ್ಲಿ ಏಪ್ರಿಲ್ 21ರಂದು ಬೆಳಗ್ಗೆ 6.30ಕ್ಕೆ ದೇವರಾದ ಭಗವಾನ್ ಮಲಯಪ್ಪ ಸ್ವಾಮಿ ಮತ್ತು ಶ್ರೀದೇವಿ ಭೂದೇವಿಯನ್ನು ನಾಲ್ಕು ಪಲ್ಲಕ್ಕಿಗಳ ಮೂಲಕ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಬಳಿಕ ವಸಂತೋತ್ಸವ ಮಂಟಪ ಉದ್ಘಾಟನೆ ನಡೆಯುತ್ತದೆ. ವಸಂತೋತ್ಸವ ಅಭಿಷೇಕದ ಮುಕ್ತಾಯದ ಬಳಿಕ ದೇವರನು ಮರಳಿ ದೇವಸ್ಥಾನಕ್ಕೆ ಕರೆತರಲಾಗುತ್ತದೆ.

ಎರಡನೇ ದಿನವಾದ ಏಪ್ರಿಲ್ 22ರಂದು ಮಲಯಪ್ಪ ಸ್ವಾಮಿಗೆ ಚಿನ್ನದ ರಥೋತ್ಸವ ನಡೆಯಲಿದೆ. ಬೆಳಗ್ಗೆ 8ರಿಂದ 10ರವರೆಗೆ ತಿರುಮಲದ ಬೀದಿಗಳಲ್ಲಿ ರಥದ ಮೆರವಣಿಗೆ ನಡೆಸಲಾಗುತ್ತದೆ. ಬಳಿಕ ವಸಂತ ಮಂಟಪದಲ್ಲಿ ಪುರೋಹಿತರು ವಸಂತೋತ್ಸವ ನೆರವೇರಿಸುವರು.

ಅಂತಿಮ ದಿನವಾದ ಏಪ್ರಿಲ್ 23ರಂದು ಶ್ರೀರಾಮ, ಸೀತಾ, ಲಕ್ಷ್ಮಣ ಮತ್ತು ಆಂಜನೇಯನೊಂದಿಗೆ ರುಕ್ಮಿಣಿ, ಸತ್ಯಭಾಮೆಯೊಂದಿಗೆ ಶ್ರೀಕೃಷ್ಣನನ್ನು ಶ್ರೀನಿವಾಸ ಸ್ವಾಮಿ ಮತ್ತು ಭೂದೇವಿ, ಪದ್ಮಾವತಿ ದೇವಿಯೊಂದಿಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ.

ಮೆರವಣಿಗೆಯ ಕೊನೆಯಲ್ಲಿ ಎಲ್ಲಾ ವಿಗ್ರಹಗಳನ್ನು ವಸಂತ ಮಂಟಪಕ್ಕೆ ತಂದು ಇರಿಸಲಾಗುತ್ತದೆ. ಅಲ್ಲಿ ಧಾರ್ಮಿಕ ಉತ್ಸವವನ್ನು ಸಂಪನ್ನಗೊಳಿಸಲಾಗುತ್ತದೆ. ಈ ಮೂರು ದಿನಗಳಲ್ಲಿ ಪ್ರತೀ ದಿನ ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಸ್ವಾಮಿ ಮತ್ತು ಅಮ್ಮನವರ ಉತ್ಸವಮೂರ್ತಿಗಳಿಗೆ ವಿವಿಧ ಅಭಿಷೇಕಗಳನ್ನು ಅದ್ಧೂರಿಯಾಗಿ ನಡೆಸಲಾಗುತ್ತದೆ. ಹಾಲು, ಮೊಸರು, ಜೇನುತುಪ್ಪ, ತೆಂಗಿನ ನೀರು, ಅರಿಶಿನ ಮತ್ತು ಶ್ರೀಗಂಧದಿಂದ ಅಭಿಷೇಕ ಮಾಡಲಾಗುತ್ತದೆ.

ಈ ಎಲ್ಲ ಆಚರಣೆಯ ಕಾರಣದಿಂದ ಈ , ಮೂರು ದಿನಗಳ ಕಾಲ ತಿರುಮಲ ದೇವಸ್ಥಾನದಲ್ಲಿ ಕೆಲವು ಸಾಮಾನ್ಯ ಸೇವೆಗಳನ್ನು ರದ್ದುಗೊಳಿಸಲಾಗುತ್ತದೆ.

Leave a Comment

Your email address will not be published. Required fields are marked *