ಸಮಗ್ರ ನ್ಯೂಸ್: ಪಿಟ್‌ಬುಲ್ ಟೆರಿಯರ್, ಅಮೇರಿಕನ್ ಬುಲ್‌ಡಾಗ್ಸ್, ರೊಟ್‌ವೀಲರ್ಸ್ ಮತ್ತು ಮ್ಯಾಸ್ಟಿಫ್ಟ್ ಸೇರಿದಂತೆ ೨೩ ತಳಿಗಳ ಅಪಾಯಕಾರಿ ನಾಯಿಗಳ ಮಾರಾಟ, ಸಾಕಾಣಿಕೆ ಹಾಗೂ ಅವುಗಳ ಸಂತಾನೋತ್ಪತ್ತಿಗೆ ನಿಷೇಧ ಹೇರಿ ಕೇಂದ್ರ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಇಂದು ಕರ್ನಾಟಕ ಹೈಕೋರ್ಟ್ ಕೇಂದ್ರದ ಸುತ್ತೋಲೆಯನ್ನು ರದ್ದುಗೊಳಿಸಿದ್ದು, ಈ ರೀತಿಯ ಕ್ರಮಕ್ಕೂ ಮುನ್ನ ಶ್ವಾನ ತಳಿ ಸಂವರ್ಧನಾ ಸಂಘಟನೆಯೊAದಿಗೆ ಸಮಾಲೋಚಿಸಬೇಕು ಎಂದು ಅಭಿಪ್ರಾಯಪಟ್ಟಿದೆ.
ಕೇಂದ್ರ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ, ಕಿಂಗ್ ಸಾಲೊಮನ್ ಡೇವಿಡ್ ಮತ್ತಿತರರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಕೇಂದ್ರದ ನಿಷೇಧ ಸುತ್ತೋಲೆಯನ್ನು ರದ್ದುಗೊಳಿಸಿದೆ. ಕಾಯ್ದೆಯಡಿ ರಚಿಸಿದ ಸಮಿತಿಯ ಶಿಫಾರಸು ಮಾತ್ರ ಪರಿಗಣಿಸಬೇಕು. ಕ್ರಮಕ್ಕೆ ಮುನ್ನ ಶ್ವಾನ ತಳಿ ಸಂವರ್ಧನಾ ಸಂಘಟನೆಯೊoದಿಗೆ ಸಮಾಲೋಚಿಸಬೇಕು. ಸರ್ಕಾರ ಶ್ವಾನ ತಳಿ ನಿಷೇಧಿಸುವ ಮುನ್ನ ಕಾನೂನಿನ ಕ್ರಮ ಅನುಸರಿಸಬೇಕು. ಶ್ವಾನ ಪಾಲಕರ ಮೇಲೆಯೂ ಹೊಣೆನಿಗದಿಪಡಿಸುವ ಅಗತ್ಯವಿದೆ. ಶ್ವಾನ ಕಡಿತಕ್ಕೊಳಗಾದವರಿಗೆ ಚಿಕಿತ್ಸೆ, ನಷ್ಟಪರಿಹಾರದಂತಹ ಹೊಣೆ ನಿಗದಿ ಸೂಕ್ತ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.