Ad Widget .

ಲೋಕಸಭಾ ಚುನಾವಣೆ/ ಬಳ್ಳಾರಿ ಮತ್ತು ರಾಯಚೂರಿನಲ್ಲಿ ನಟ ಪವನ್ ಕಲ್ಯಾಣ್ ಪ್ರಚಾರ

ಸಮಗ್ರ ನ್ಯೂಸ್: ಕರ್ನಾಟಕ ಲೋಕಸಭಾ ಚುನಾವಣಾ ಪ್ರಚಾರ ಭರಾಟೆ ಹೆಚ್ಚುತ್ತಿದ್ದು, ಕೇಂದ್ರದಿಂದ ಹಾಗೂ ಅಕ್ಕಪಕ್ಕದ ನಾಯಕರಿಂದ ಘಟನಾನುಘಟಿ ನಾಯಕರನ್ನೇ ಕರೆತಂದು ಪ್ರಚಾರ ನಡೆಸಲು ಎನ್‍ಡಿಎ ನಾಯಕರು ನಿರ್ಧರಿಸಿದ್ದಾರೆ.

Ad Widget . Ad Widget .

ಆ ಹಿನ್ನೆಲೆಯಲ್ಲಿ, ಏ. 14ರಂದು ಪ್ರಧಾನಿ ನರೇಂದ್ರ ಮೋದಿಯವರು ಮೈಸೂರು, ಮಂಗಳೂರಿನಲ್ಲಿ ಪ್ರಚಾರ ನಡೆಸಿದರೆ, ಏ. 17ರಂದು ತೆಲುಗು ಸೂಪರ್ ಸ್ಟಾರ್ ಹಾಗೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಬಳ್ಳಾರಿ ಹಾಗೂ ರಾಯಚೂರಿಗೆ ಹೋಗಿ ಅಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಬಿಜೆಪಿ ನಾಯಕ ರಾಜಾ ಅಮೇಶ್ವರ ನಾಯಕ್ ಅವರ ಪರವಾಗಿ ಪ್ರಚಾರ ನಡೆಸಲಿದ್ದಾರೆ.

Ad Widget . Ad Widget .

ಅವರ ಜನಸೇನಾ ಪಾರ್ಟಿಯು ಎನ್ ಡಿಎ ಅಂಗಪಕ್ಷವಾಗಿರುವುದರಿಂದ ಅವರನ್ನು ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಪ್ರಚಾರಕ್ಕೆ ಬಳಸಿಕೊಳ್ಳಲು ಬಿಜೆಪಿ ಯೋಚಿಸಿದೆ. ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ತೆಲುಗು ಭಾಷಿಗರು ಹೆಚ್ಚಾಗಿದ್ದಾರೆ. ಅಲ್ಲದೆ, ಅವರಿಗೂ ಸೇರಿದಂತೆ ಆ ಭಾಗದ ಜನರಿಗೆ ತೆಲುಗು ಸ್ಟಾರ್ ಗಳೆಂದರೆ ಅಚ್ಚುಮೆಚ್ಚು ಎಂಬ ಕಾರಣದಿಂದ ಈ ಪ್ರಚಾರ ತಂತ್ರವನ್ನು ಬಳಸಿಕೊಳ್ಳಲಾಗಿದೆ.

Leave a Comment

Your email address will not be published. Required fields are marked *