ಸಮಗ್ರ ನ್ಯೂಸ್ : ಪವಿತ್ರ ರಂಜಾನ್ ತಿಂಗಳಲ್ಲಿ 30 ದಿನಗಳ ಕಠಿಣ ಉಪವಾಸ ವ್ರತವನ್ನು ಸಂಪೂರ್ಣವಾಗಿ ಮಾಡಿದ ಭಕ್ತನಿಗೆ ಇಂದು ಅವನ ಪರಿಶ್ರಮದ ಬೆಲೆಯನ್ನು ಪಡೆಯುವ ದಿನವಾಗಿದೆ. ಅದಲ್ಲದೆ ರಂಜಾನ್ ಹಬ್ಬ ಭಾವೈಕ್ಯದ ದಿನವಾಗಿದೆ ಎಂದು ಜಾಮಿಯಾ ಮಸೀದಿಯ ಧರ್ಮ ಗುರುಗ ಜಹೀರ್ ಅಹ್ಮದ್ ಖಾಸ್ಮಿ ಕಾರ್ಕಳದ ಜಾಮಿಸಿದಿಯ ಇಧ್ಗಾದಲ್ಲಿ ಮೆರೆದಿರುವ ಮುಸ್ಲಿಂ ಬಾಂಧವರಿಗೆ ಉದ್ದೇಶಿಸಿ ಹೇಳಿದರು.
ಇಂದು ಬೆಳಗಿನಿಂದಲೇ ಕಾರ್ಕಳದ ಸುತ್ತಮುತ್ತಲಿನ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ವಿಶೇಷ ನಮಾಜಿಗೋಸ್ಕರ ಬೆಳಕಿನಿಂದಲೇ ಇದ್ದಗಾದಲ್ಲಿ ಜಮಾಹಿಸಿದ್ದರು. ನಂತರ ಕಾರ್ಕಳ ಮುಸ್ಲಿಂ ಜಮಾತ್ನ ಅಧ್ಯಕ್ಷ ಅಶ್ವಾಕ್ ಅಹಮದ್ ಮಾತನಾಡಿ, ರಂಜಾನ್ ತಿಂಗಳಲ್ಲಿ ನಮ್ಮ ಮಸೀದಿಗಳಿಗೆ ಉತ್ತಮ ದೇಣಿಗೆಗಳನ್ನು ನೀಡಿದ ದಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಮುಂದೆ ಬರುವ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ತಪ್ಪದೆ ಚಲಾಯಿಸಿ ಎಂದು ಕರೆ ನೀಡಿದರು.
ನಂತರ ಧರ್ಮ ಗುರುಗ ಜಹೀರ್ ಅಹ್ಮದ್ ಖಾಸ್ಮಿ ಪವಿತ್ರ ನಮಾಜ್ ಅನ್ನು ನೆರವೇರಿಸಿದರು. ನಂತರ ಮುಸ್ಲಿಂ ಬಾಂಧವರು ಹಬ್ಬದ ಶುಭಾಶಯಗಳು ವಿನಿಮಯ ಮಾಡಿಕೊಂಡರು. ಮತ್ತು ತಮ್ಮವರು ಮೃತಪಟ್ಟ ಹಿರಿಯರ ಸಮಾಧಿಗಳಿಗೆ ಪ್ರಾರ್ಥನೆ ಸಲ್ಲಿಸಿದರು.