Ad Widget .

ನಾಗ್ಪುರ:23 ಲಕ್ಷ ರೂ.ಕಳೆದುಕೊಂಡ ಎಂಬಿಎ ವಿದ್ಯಾರ್ಥಿ

ಸಮಗ್ರ ನ್ಯೂಸ್‌ : ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿ ಮಹಾರಾಷ್ಟ್ರದ ನಾಗ್ಪುರದ ಕಾಲೇಜ್‌ವೊಂದರ ಎಂಬಿಎ ವಿದ್ಯಾರ್ಥಿಗೆ ₹23 ಲಕ್ಷ ವಂಚನೆ ಮಾಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪಶ್ಚಿಮ ಬಂಗಾಳದ ಹೂಗ್ಲಿ ಮೂಲದ 28 ವರ್ಷದ ಎಂಬಿಎ ವಿದ್ಯಾರ್ಥಿ ಮೋಸಕ್ಕೆ ಒಳಗಾಗಿದ್ದಾನೆ. 2023ರ ನವೆಂಬರ್ 17ರಂದು ಟೆಲಿಗ್ರಾಮ್ ಮೆಸೇಜಿಂಗ್‌ ಆ್ಯಪ್‌ನಲ್ಲಿ ಹೂಡಿಕೆ ಸಲಹೆಗಾರನಂತೆ ವಂಚಕ ವಿದ್ಯಾರ್ಥಿಯನ್ನು ಸಂಪರ್ಕಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Ad Widget . Ad Widget . Ad Widget .

ವಿದ್ಯಾರ್ಥಿಯು ಆರಂಭದಲ್ಲಿ ₹1,000 ಹೂಡಿಕೆ ಮಾಡಿ ₹1,400 ಗಳಿಸಿದ್ದನು. ಆ ಮೂಲಕ ವಿದ್ಯಾರ್ಥಿಯಲ್ಲಿ ನಂಬಿಕೆ ಮತ್ತಷ್ಟು ಹೆಚ್ಚಾಯಿತು. ವಂಚಕನು ಮೋಸ ಮಾಡಲು ಈ ಯುವಕನ ನಂಬಿಕೆಯೇ ಆಧಾರವಾಯಿತು. ಬಳಿಕ ಹೆಚ್ಚಿನ ಲಾಭ ಗಳಿಸುವ ಇರಾದೆಯಲ್ಲಿ ಒಟ್ಟು 23 ಲಕ್ಷ ಹೂಡಿಕೆ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಹಣ ಸಿಗದಿದ್ದಾಗ ಕೊನೆಗೂ ವಂಚನೆ ಮನಗಂಡ ವಿದ್ಯಾರ್ಥಿ, ವಾಥೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಇದರ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Leave a Comment

Your email address will not be published. Required fields are marked *