Ad Widget .

ಚಾಮರಾಜನಗರ: ಕಾಂಗ್ರೇಸ್ ಅಡ್ಡದಾರಿ ಹಿಡಿದಿದೆ ಇದಕ್ಕೆ ಮತದಾರರೆ ತಕ್ಕ ಉತ್ತರ ನೀಡುತ್ತಾರೆ- ಬಿ.ವೈ.ವಿಜೇಂದ್ರ

ಸಮಗ್ರ ನ್ಯೂಸ್ : ಬೆಂಗಳೂರು ಗ್ರಾಮಾಂತರ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಳ್ಳೇಗಾಲದಲ್ಲಿ ಮಾತನಾಡಿದ ಬಿ.ವೈ.ವಿಜೇಂದ್ರ ಕಾಂಗ್ರೆಸ್ಸಿಗರು ಹತಾಶೆಯಿಂದ ಈ ರೀತಿ ಕೆಲಸಕ್ಕೆ ಮುಂದಾಗಿದ್ದಾರೆ ಇದಕ್ಕೆ ಜನರು ತಕ್ಕ ಉತ್ತರ ಕೊಡ್ತಾರೆ ಎಂದರು.

Ad Widget . Ad Widget .

ಚಾಮರಾಜನಗರ ಲೋಕಸಭಾ ಅಭ್ಯರ್ಥಿ ಬಾಲರಾಜು ಪರ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ವಿಜೇಂದ್ರ ಅವರು ಬೆಂಗಳೂರು ಗ್ರಾಮಾಂತರದಲ್ಲಿ ಹಣಬಲ ಮತ್ತು ಅಧಿಕಾರದ ಬಲದಿಂದ ಹೇಗಾದರು ಮಾಡಿ ಗೆಲುವು ಕಾಣಬೇಕು ಎಂದು ಕಾಂಗ್ರೇಸ್ ನವರು ಅಡ್ಡದಾರಿ ಹಿಡಿದಿದ್ದಾರೆ. ಇದಕ್ಕೆ ಮತದಾರರೆ ತಕ್ಕ ಉತ್ತರ ನೀಡಲಿದ್ದಾರೆ ಗೂಂಡಾ ಸಂಸ್ಕೃತಿಗೆ ಇತಿಶ್ರೀ ಆಡಳಿದ್ದಾರೆ ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದರು.

Ad Widget . Ad Widget .

ಯಡಿಯೂರಪ್ಪ ಹಾಗೂ ಅವರ ಮಕ್ಕಳ ಫೋಟೋ ಹಾಕಿ ಪ್ರಚಾರ ಮಾಡಲಿ ಎಂಬ ಈಶ್ವರಪ್ಪ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿ ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಅದು ಅವರ ಹಣೆಬರಹ ಏನಾಗುತ್ತೋ ಆಗ್ಲಿ, ಅದನ್ನು ನಾವು ತೀರ್ಮಾನ ಮಾಡ್ತೀವಿ ಅವರು ಮಾಡೋದು ಬೇಡ ಎಂದರು.

ಚಾಮರಾಜನಗರದಲ್ಲಿ ಯಾವ ಆಪರೇಷನ್ ಹಸ್ತನು ಇಲ್ಲ ಏನು ಇಲ್ಲ ಯಾವ ಸಿದ್ದರಾಮಯ್ಯ ,ಡಿಕೆಶಿ ಏನೂ ಮಾಡೋಕಾಗೋದಿಲ್ಲ , ಅಪಪ್ರಚಾರಕ್ಕೆ ತಲೆಕೆಡಿಸಿಕೊಳ್ಳದೆ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸಿ ಎಂದರು

Leave a Comment

Your email address will not be published. Required fields are marked *