Ad Widget .

ಎ.14ರ ಮಂಗಳೂರಿನಲ್ಲಿ ಮೋದಿ ಸಮಾವೇಶ ದಿಢೀರ್ ರದ್ದು| ರೋಡ್ ಶೋ ಸೀಮಿತವಾದ ನಮೋ ಭೇಟಿ

ಸಮಗ್ರ ನ್ಯೂಸ್: ಮಂಗಳೂರು ನಗರದ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಎಪ್ರಿಲ್ 14ರಂದು ನಡೆಯಬೇಕಿದ್ದ ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶ ಕೊನೆಯ ಕ್ಷಣದಲ್ಲಿ ರದ್ದಾಗಿದ್ದು, ಸಮಾವೇಶದ ಬದಲು ಬರೀ ರೋಡ್ ಶೋ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

Ad Widget . Ad Widget .

ಕುಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸುವುದಕ್ಕೆ ಬಿಜೆಪಿ ಸಿದ್ದತೆ ನಡೆಸಿತ್ತು. ಕರಾವಳಿಯ ಎರಡು ಜಿಲ್ಲೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಅಭ್ಯರ್ಥಿಗಳಲ್ಲಿ ಹೊಸ ಹುರುಪು ತಂದಿತ್ತು, ಅಲ್ಲದೆ ಬಿಜೆಪಿ ಕೂಡ ದಾಖಲೆ ಮಟ್ಟದಲ್ಲಿ ಜನರನ್ನು ಸೇರಿಸುವುದಾಗಿ ಹೇಳಿತ್ತು, ಇಂದು ಬೆಳಗ್ಗೆ ಮೈದಾನದಲ್ಲಿ ಚಪ್ಪರ ಮುಹೂರ್ತವನ್ನೂ ನಡೆಸಲಾಗಿತ್ತು.

Ad Widget . Ad Widget .

ಜರ್ಮನ್ ಪೆಂಡಾಲ್ ಹಾಕಲು ಸಿದ್ಧತೆಯೂ ನಡೆದಿತ್ತು. ಆದರೆ ಕೆಲವೊಂದು ಕಾರಣಗಳಿಂದ ಸಮಾವೇಶ ರದ್ದುಗೊಂಡಿದೆ ಎಂದು ತಿಳಿದುಬಂದಿದೆ.

ಇದೀಗ ಸಮಾವೇಶದ ಬದಲು ರೋಡ್ ಶೋ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಎಪ್ರಿಲ್ 14ರಂದು ಸಂಜೆ ವೇಳೆಗೆ ಮೋದಿ ರೋಡ್ ಶೋ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇನ್ನಷ್ಟೇ ರೋಡ್ ಶೋ ರೂಟ್ ಮ್ಯಾಪ್ ಸಿದ್ಧಪಡಿಸಬೇಕಿದೆ.

Leave a Comment

Your email address will not be published. Required fields are marked *