Ad Widget .

ನಂಜನಗೂಡು : ಹಾಲು ಉತ್ಪಾದಕರಿಗೆ ಹಣ ಜಮೆ ಮಾಡುವಂತೆ ಆಗ್ರಹ

ಸಮಗ್ರ ನ್ಯೂಸ್ : ಹಾಲು ಉತ್ಪಾದಕರಿಗೆ ಕೂಡಲೇ ಹಣವನ್ನು ಜಮೆ ಮಾಡುವಂತೆ ನಂಜನಗೂಡಿನಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಂಪಾಪುರ ಗ್ರಾಮದ ಹಾಲು ಉತ್ಪಾದಕರು ಒತ್ತಾಯವನ್ನು ಮಾಡಿದ್ದಾರೆ.

Ad Widget . Ad Widget .

ನಂಜನಗೂಡು ನಗರದ ತಾಲೂಕು ಆಡಳಿತ ಭವನದ ಮುಂಭಾಗದಲ್ಲಿ ಇಂದು ಹಂಪಾಪುರ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಹಾಲು ಉತ್ಪಾದಕರಿಗೆ ಹಣ ಜಮೆಯಾಗಿಲ್ಲ. ಸರ್ಕಾರದಿಂದ ನೀಡುವ ಪ್ರೋತ್ಸಾಹ ಧನವನ್ನು ಸರಿಯಾಗಿ ನೀಡುತ್ತಿಲ್ಲ. ಮಹಿಳಾ ಸಹಕಾರ ಸಂಘ ಆಗಿರುವುದರಿಂದ ಮಹಿಳಾ ಕಾರ್ಯದರ್ಶಿ ಕಾರ್ಯನಿರ್ವಹಿಸಬೇಕು. ಆದರೆ ಅವರ ಪತಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಲನ್ನು ಅವರ ಮನೆಯಲ್ಲಿಯೇ ಸಂಗ್ರಹ ಮಾಡುತ್ತಿದ್ದಾರೆ.

Ad Widget . Ad Widget .

ಉತ್ಪಾದಕರಿಗೆ ಬೋನಸ್ ನೀಡಿಲ್ಲ ಕೂಡಲೇ ರೈತರ ಖಾತೆಗೆ ಹಣವನ್ನು ಜಮೆ ಮಾಡಬೇಕು. ಸಂಘದಲ್ಲಿ ಕಾನೂನು ಉಲ್ಲಂಘನೆ ಮಾಡಿರುವ ಕಾರ್ಯದರ್ಶಿಯ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಕೆಲಸದಿಂದ ವಜಾ ಮಾಡಬೇಕು. ಹೊಸದಾಗಿ ಕಾರ್ಯದರ್ಶಿಯನ್ನು ನೇಮಕ ಮಾಡಬೇಕು ಹಾಗೂ ಕಮಿಟಿ ರಚನೆ ಮಾಡಿ ಚುನಾವಣೆಯನ್ನು ಮಾಡಬೇಕು ಎಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರು ಹಾಗೂ ಹಾಲು ಉತ್ಪಾದಕರು ಭಾಗವಹಿಸಿದ್ದರು.

Leave a Comment

Your email address will not be published. Required fields are marked *