Ad Widget .

ಬಿಜಾಪುರ : ಐಇಡಿ ಸ್ಫೋಟಗೊಂಡು ಇಬ್ಬರು ವಿಶೇಷ ಕಾರ್ಯ ಪಡೆಯ ಸಿಬ್ಬಂದಿಗೆ ಗಾಯ

ಸಮಗ್ರ ನ್ಯೂಸ್‌ : ಸುಧಾರಿತ ಸ್ಫೋಟಕ ಸಾಧನ ಸ್ಫೋಟಗೊಂಡು ವಿಶೇಷ ಕಾರ್ಯ ಪಡೆಯ ಇಬ್ಬರು ಸಿಬ್ಬಂದಿಗೆ ಗಾಯಗಳಾಗಿರುವ ಘಟನೆ ಛತ್ತೀಸಗಢದ ಬಿಜಾಪುರ ಜಿಲ್ಲೆಯ ಇಟ್ವಾರ್ ಗ್ರಾಮದಲ್ಲಿ ಇಂದು ನಸುಕಿನ ಜಾವ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

Ad Widget . Ad Widget .

ಭದ್ರತಾ ಕಾರ್ಯಾಚರಣೆ ಸಂಬಂಧ ಸಿಬ್ಬಂದಿಯು ಆ ಸ್ಥಳಕ್ಕೆ ತೆರಳಿದ್ದ ವೇಳೆ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗಾಯಗೊಂಡವರನ್ನು ಶಿವಲಾಲ್ ಮಾಂಡವಿ ಮತ್ತು ಮಿಥ್ಲೇಶ್ ಮಾರ್ಕಮ್ ಎಂದು ಗುರುತಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ, ಈ ಸ್ಫೋಟಕವನ್ನು ನಕ್ಸಲರು ಇರಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Ad Widget . Ad Widget .

Leave a Comment

Your email address will not be published. Required fields are marked *